ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಯುವ ಘಟಕ- ನೂತನ ಜಿಲ್ಲಾ ಅಧ್ಯಕ್ಷ ಕೋಟ ರಾಮಕೃಷ್ಣ ಆಚಾರ್ಯ ಅವರಿಗೆ ಪದಪ್ರದಾನ-Times of karkala

ಉಡುಪಿ : ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾದ ಯುವ ಘಟಕದ ಉಡುಪಿ ಜಿಲ್ಲಾ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಕೋಟ ರಾಮಕೃಷ್ಣ  ಆಚಾರ್ಯ ಅವರಿಗೆ ಬೆಂಗಳೂರಿನ ಶಾಸಕರ ಭವನದಲ್ಲಿ ಬುಧವಾರ ಮಹಾಸಭಾದ ರಾಜ್ಯ ಅಧ್ಯಕ್ಷರಾದ ವಿಧಾನ ಪರಿಷತ್‌ ಸದಸ್ಯ ಕೆ.ಪಿ.ನಂಜುಂಡಿ ವಿಶ್ವಕರ್ಮ ಸಮ್ಮುಖದಲ್ಲಿ ರಾಜ್ಯದ ಮುಜರಾಯಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಪದಪ್ರದಾನ ಮಾಡಿದರು. 


ಜಿಲ್ಲಾಧ್ಯಕ್ಷರ ನೇಮಕ ಪತ್ರ ಹಸ್ತಾಂತರಿಸಿ ಮಾತನಾಡಿದ ಮಹಾಸಭಾದ ರಾಜ್ಯ ಅಧ್ಯಕ್ಷರಾದ ವಿಧಾನ ಪರಿಷತ್‌ ಸದಸ್ಯ ಕೆ.ಪಿ.ನಂಜುಂಡಿ ವಿಶ್ವಕರ್ಮ ಉಡುಪಿ ಜಿಲ್ಲೆ ಅತೀ ಶೀಘ್ರವಾಗಿ ಮಹಾಸಭಾದ ಮೂಲಕ ವಿಶ್ವಕರ್ಮ ಯುವ ಸಮುದಾಯವನ್ನು ಯಶಸ್ವಿಯಾಗಿ ಸಂಘಟಿಸಬೇಕಿದೆ. ಆರ್ಥಿಕವಾಗಿ ದುರ್ಬಲರಾಗಿರುವ ವಿಶ್ವಕರ್ಮರಿಗೆ ಸರ್ಕಾರದ ಸವಲತ್ತುಗಳನ್ನು ತಲುಪಿಸುವುದು, ಸಮಾಜದಲ್ಲಿ ಮುಂಚೂಣಿಯಲ್ಲಿ ನಿಂತು ಜನರ ಸೇವೆ ಮಾಡವಂತೆ ಕರೆ ನೀಡಿದರು.ವಿಶ್ವಕರ್ಮರೆಲ್ಲರೂ ರಾಜ್ಯದಾದ್ಯಂತ ಒಂದೇ ಸಂಸ್ಥೆಯಡಿ ಸಂಘಟಿತರಾಗಬೇಕು. ರಾಜಕೀಯವಾಗಿಯೂ ಸಕ್ರೀಯರಾಗಬೇಕು ಎಂದು ಕೆ.ಪಿ.ನಂಜುಂಡಿ ಹೇಳಿದರು.

ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಕುಂದಾಪುರದ ನೇರಂಬಳ್ಳಿ ರಮೇಶ್‌ ಆಚಾರ್ಯ ಅವರನ್ನು ಸಚಿವ ಕೋಟ ಶ್ರೀನಿವಾಸ ಪೂಜಾರಿ ಸನ್ಮಾನಿಸಿದರು.

ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾದ ಅಧ್ಯಕ್ಷ ನೇರಂಬಳ್ಳಿ ರಮೇಶ ಆಚಾರ್ಯ, ವಿಧಾನ ಪರಿಷತ್‌ ಸದಸ್ಯರಾದ ರಘು ಆಚಾರ್‌, ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾದ ಯುವ ಘಟಕದ ರಾಜ್ಯ ಅಧ್ಯಕ್ಷ ಮಳವಳ್ಳಿ ಶ್ರೀನಿವಾಸ್‌, ಲಕ್ಷ್ಮೀ ಕೆ.ಪಿ.ನಂಜುಂಡಿ,ಹೆಬ್ರಿ ತಾಲ್ಲೂಕು ಅಧ್ಯಕ್ಷ ಎಚ್.ರಮೇಶ ಆಚಾರ್ಯ, ಪ್ರಧಾನ ಕಾರ್ಯದರ್ಶಿ ಸುಕುಮಾರ್‌ ಮುನಿಯಾಲ್ ಸಹಿತ ರಾಜ್ಯ ಮಟ್ಟದ ವಿಶ್ವಕರ್ಮ ಸಮಾಜದ ಮುಖಂಡರು ಭಾಗವಹಿಸಿದ್ದರು.


ಜಾಹೀರಾತು




https://www.timesofkarkala.in/2020/10/blog-post_8.html












Post a comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget