ವಿವಾಹಿತನೊಂದಿಗೆ ಪ್ರೇಮ ಪರಿಣಯ,ಯುವತಿ ಆತ್ಮಹತ್ಯೆ-Times Of Karkala

ಉಡುಪಿ,ಅ.26: ಕುಕ್ಕೆಹಳ್ಳಿ ರಕ್ಷಿತಾ ನಾಯಕ್ ಸಂಶಯಾಸ್ಪದ  ಸಾವಿಗೆ ಹೊಸ ಟ್ವಿಸ್ಟ್ ಸಿಕ್ಕಿದ್ದು, ವಿವಾಹಿತ ಪ್ರಿಯಕರ ಪ್ರಶಾಂತ್ ಕುಂದರ್ ತನ್ನ ಪತ್ನಿಯನ್ನು ತೊರೆದು ತನ್ನ ಜತೆ ವಾಸ ಮಾಡಿಲ್ಲವೆಂದು ನೊಂದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ. 



ರಕ್ಷಿತಾಳನ್ನು ಆಸ್ಪತ್ರೆ ಸೇರಿಸಿ ಪರಾರಿಯಾಗಿದ್ದ ಪ್ರಶಾಂತ್ ನನ್ನು ವಶಕ್ಕೆ ಪಡೆದ ಉಡುಪಿ ಪೊಲೀಸರು ವಿಚಾರಣೆಗೆ ಒಳಪಡಿಸಿದಾಗ ಆತ ಸತ್ಯಾಂಶ   ಬಾಯಿಬಿಟ್ಟಿದ್ದಾನೆ. 

ಕಳೆದ ಶನಿವಾರ ಕುಕ್ಕೆಹಳ್ಳಿಯ ರಕ್ಷಿತಾ ನಾಯಕ್ ತಾನು ವಾಸಿಸುತ್ತಿದ್ದ ಬಾಡಿಗೆ ಮನೆಯ ಅಂಬಾಗಿಲಿನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು, ಆತ್ಮಹತ್ಯೆಗೆ ಮುನ್ನ, ಪ್ರಿಯಕರ ಪ್ರಶಾಂತ್ ಕುಂದರ್ ಗೆ ಫೋನ್ ಮಾಡಿ, ತನ್ನ ಜತೆ ಸಂಸಾರ ಮಾಡಬೇಕು, ಇಲ್ಲವಾದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಹೇಳಿ ಸಂಭಾಷಣೆ ಕಡಿತಗೊಳಿಸಿದ್ದಳು. 

ಹೆದರಿದ ಪ್ರಶಾಂತ್  ತತ್ ಕ್ಷಣ ಆಕೆಯಿದ್ದ ಬಾಡಿಗೆ ಮನೆಗೆ ದೌಡಾಯಿಸಿದ್ದು, ಅಷ್ಟರಲ್ಲಿ ಆಕೆ ನೇಣು ಬೀಗಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಳು. 

ಪ್ರಶಾಂತ್ ಮನೆಯ ಹಿಂಬಾಗಿಲನ್ನು ಒಡೆದು, ಆಕೆಯನ್ನು ಕುಣಿಕೆಯಿಂದ ಕೆಳಗಿಳಿಸಿ, ನಂತರ ಗಾಂಧಿ ಆಸ್ಪತ್ರೆಗೆ ದಾಖಲಿಸಿದ್ದ. ಅಷ್ಟೊತ್ತಿಗಾಗಲೇ ರಕ್ಷಿತಾ ಪ್ರಾಣ ಹಾರಿಹೋಗಿತ್ತು. ಈ ವಿಷಯ ತಿಳಿಯುತ್ತಿದ್ದಂತೆ ಪ್ರಶಾಂತ್ ಆಕೆಯ ಮನೆಯವರಿಗೆ ವಿಷಯ ತಿಳಿಸಿದ್ದ ಎಂದು ತನಿಖೆಯಿಂದ ತಿಳಿದು ಬಂದಿದೆ. ನಂತರ ಹೆದರಿ ಆಸ್ಪತ್ರೆಯಿಂದ ಕಾಲ್ಕಿತ್ತಿದ್ದ ಎನ್ನಲಾಗಿದೆ. 

ಇಂಟೀರಿಯರ್ ಡಿಸೈನ್ ಕೆಲಸ ಮಾಡುತ್ತಿದ್ದ ಪ್ರಶಾಂತ್ ಗೆ ಇನ್ಸ್ಟಾಗ್ರಾಮ್ ನಲ್ಲಿ ರಕ್ಷಿತಾ ಪರಿಚಯವಾಗಿದ್ದಳು. ಆಕೆ ಕೂಡ ಇನ್ಸ್ಟಾಗ್ರಾಮ್ ನಲ್ಲಿ ಇಂಟೀರಿಯರ್ ಡಿಸೈನ್ ವಸ್ತುಗಳನ್ನು ಖರೀದಿಸಿ ಮಾರಾಟ ಮಾಡುತ್ತಿದ್ದಳು. 

ಪ್ರಶಾಂತ್ ರಕ್ಷಿತಾ ಜತೆ ಅಕ್ರಮ ಸಂಬಂಧ ಹೊಂದಿದ್ದು, ಆಕೆಗಾಗಿ ಬಾಡಿಗೆ ಮನೆಯನ್ನೂ ಕೂಡ ಮಾಡಿಸಿಕೊಟ್ಟಿದ್ದ. ರಕ್ಷಿತಾ ತಾನು ಮಂಗಳೂರಿನ ಪಿಜಿಯಲ್ಲಿ ಇರುವುದಾಗಿ ಹೆತ್ತವರಿಗೆ ಸುಳ್ಳು ಹೇಳಿದ್ದಳು ಎನ್ನಲಾಗಿದೆ. ಪ್ರಶಾಂತ್ ಪತ್ನಿಗೂ ತನ್ನ ಪತಿಯ ಅಕ್ರಮ ಸಂಬಂಧದ ಬಗ್ಗೆ ತಿಳಿದಿದ್ದು, ರಕ್ಷಿತಾಗೆ ಫೋನ್ ಮಾಡಿ ತರಾಟೆಗೆ ತೆಗೆದುಕೊಂಡಿದ್ದಳು ಎನ್ನಲಾಗಿದೆ.  



ಜಾಹೀರಾತು




https://www.timesofkarkala.in/2020/10/blog-post_8.html














Labels:

Post a comment

MKRdezign

Contact form

Name

Email *

Message *

Powered by Blogger.
Javascript DisablePlease Enable Javascript To See All Widget