ಬಿರುವೆರ್ ಕುಡ್ಲ ಸಂಘಟನೆಯ ಬೆದ್ರ ಘಟಕದಿಂದ ಹಡಿಲು ಗದ್ದೆಯಲ್ಲಿ ಸಾಗುವಳಿ:ಅಭಯಚಂದ್ರ ಜೈನ್,ವಸಂತ ಬಂಗೇರ ಭೇಟಿ-Times Of Karkala

ಬೆಳ್ತಂಗಡಿ,ಅ.12: ಬಿರುವೆರ್ ಕುಡ್ಲ ಸಂಘಟನೆಯ ಬೆದ್ರ ಘಟಕದ ಸದಸ್ಯರು  ಬೆಳ್ತಂಗಡಿ ತಾಲೂಕಿನ ಮರೋಡಿಯಲ್ಲಿ ಸುಮಾರು 4 ಎಕ್ರೆ ಹಡಿಲು ಇದ್ದ ಗದ್ದೆಯನ್ನು ಸಾಗುವಳಿ ಮಾಡಿದ್ದು , ಈ ಗದ್ದೆಗೆ ಕರ್ನಾಟಕ ರಾಜ್ಯದ ಮಾಜಿ ಸಚಿವರು, ಮುಲ್ಕಿ-ಮೂಡಬಿದ್ರೆಯ ಮಾಜಿ ಶಾಸಕರಾದಂತಹ ಅಭಯಚಂದ್ರ ಜೈನ್ ಹಾಗೂ ಬೆಳ್ತಂಗಡಿ ತಾಲೂಕಿನ ಮಾಜಿ ಶಾಸಕರಾದ ವಸಂತ ಬಂಗೇರ ರವರು ಭೇಟಿ  ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅಭಯಚಂದ್ರ ಜೈನ್, ಬಿರುವೆರ್ ಕುಡ್ಲ ಬೆದ್ರ ಘಟಕದ ಯುವಕರ ಕೃಷಿ ಕಾರ್ಯವು ಇತರ ಸಂಘ ಸಂಸ್ಥೆಗಳಿಗೆ ಮಾದರಿಯಾಗಿದೆ, ವಿಶಿಷ್ಟವಾದ ಯೋಜನೆಯೊಂದಿಗೆ ಮಾಡಿದ ಕಾರ್ಯವು ಯಶಸ್ವಿಯಾಗಲೆಂದು ಹಾರೈಸಿದರು. 
ನಂತರ ಮಾತನಾಡಿದ ವಸಂತ ಬಂಗೇರರು, ಬಡವರಿಗೆ ಅಕ್ಕಿ ದಾನ ನೀಡುವ ಕಾರ್ಯವೇ ಶ್ರೇಷ್ಠ, ಇದಕ್ಕಿಂತಲೂ ಗೋಶಾಲೆಗಳಿಗೆ ಬೈ ಹುಲ್ಲು ದಾನ ಮಾಡುವ ಕಾರ್ಯ ಇನ್ನೂ ಶ್ರೇಷ್ಠ ಎಂದು ಸಂಘಟನೆಯ ಕಾರ್ಯವನ್ನು ಸ್ಲಾಘಿಸಿ ಶುಭಹಾರೈಸಿದರು.

ಈ ಸಂದರ್ಭದಲ್ಲಿ ಗದ್ದೆಯ ಯಜಮಾನ ಚಂದಪ್ಪ ಪೂಜಾರಿ, ಮೂಡಬಿದ್ರೆಯ ಯುವ ಕಾಂಗ್ರೆಸ್ ನ ಅಧ್ಯಕ್ಷ ಚಂದ್ರಹಾಸ ಸನಿಲ್, ಬೆಳ್ತಂಗಡಿ ತಾಲೂಕು ಪಂಚಾಯತ್ ಸದಸ್ಯೆ ರೂಪಲತ, ಕಾಶಿಪಟ್ಣ ಗ್ರಾಮ ಪಂಚಾಯತ್ನ ಮಾಜಿ ಅಧ್ಯಕ್ಷರಾದ ಸತೀಶ್. ಕೆ, ಮರೋಡಿ ಗ್ರಾಮ ಪಂಚಾಯತ್ ನ  ಮಾಜಿ ಅಧ್ಯಕ್ಷ ಸದಾನಂದ ಶೆಟ್ಟಿ ಹಾಗೂ ಬಿರುವೆರ್ ಕುಡ್ಲ ಸಂಘಟನೆಯ ಪದಾಧಿಕಾರಿಗಳು ಹಾಗೂ ಇತರರು ಉಪಸ್ಥಿತರಿದ್ದರು.

ಜಾಹೀರಾತು
https://www.timesofkarkala.in/2020/10/blog-post_8.html

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget