ಕಾರ್ಕಳ ,ಅ:ಮಂಗಳೂರು ವಿಶ್ವವಿದ್ಯಾಲಯದಲ್ಲಿ 2 ವರ್ಷದ ಹಿಂದೆ ಪ್ರೊಫೆಸರ್ ಅರಬ್ಬಿ ಎಂಬಾತ ವಿದ್ಯಾರ್ಥಿನಿಗೆ ದೌರ್ಜನ್ಯ ಎಸಗಿದ್ದು ಆದರೆ ಆಕೆ ಅದನ್ನು ವಿಶ್ವವಿದ್ಯಾಲಯದ ಗಮನಕ್ಕೆ ತಂದರೂ ಅಂದಿನ ವೈಸ್ ಚಾನ್ಸಲರ್ ಖಾನ್ ಅದನ್ನು ನಿರ್ಲಕ್ಷಿಸಿ ಪರೋಕ್ಷವಾಗಿ ಬೆಂಬಲಕ್ಕೆ ನಿಂತು ರಾಜ್ಯ ಮಹಿಳಾ ಆಯೋಗಕ್ಕೂ 2 ವರ್ಷವಾದರೂ ವರದಿ ಸಲ್ಲಿಸಿಲ್ಲ.
ಆದ್ದರಿಂದ ವಿದ್ಯಾರ್ಥಿನಿಗೆ ಶೀಘ್ರವೇ ನ್ಯಾಯ ಸಿಗಬೇಕು ಮತ್ತು ಪ್ರೊ.ಅರಬ್ಬಿಯ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಕಾರ್ಕಳ ನಗರ ಎಬಿವಿಪಿ ಕಡೆಯಿಂದ ಬಂಡೀಮಠ ಬಸ್ಸು ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಲಾಯಿತು.
ಮನೀಶ್ ಕುಲಾಲ್ ಮಾತನಾಡಿ ವಿದ್ಯಾರ್ಥಿನಿಗೆ ಶಿಘ್ರವೇ ನ್ಯಾಯ ದೊರಕಿಸಿ ಕೊಡದಿದ್ದಲ್ಲಿ ಭವಿಷ್ಯದಲ್ಲಿ ಎಬಿವಿಪಿ ಉಗ್ರ ಹೋರಾಟ ಮಾಡುವ ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ತಾಲೂಕು ಸಂಚಾಲಕ್ ಯುಕೇಶ್.ಎಮ್.ಗೌಡ, ನಗರಕಾರ್ಯದರ್ಶಿ ಅಮಿತ್.ಪೂಜಾರಿ, ನಗರ ವಿದ್ಯಾರ್ಥಿನಿ ಪ್ರಮುಖ್ ಅಪರ್ಣ ಭಾಗಿಯಾಗಿದ್ದರು.
Post a comment