ಸುರೇಂದ್ರ ಬಂಟ್ವಾಳ ಹತ್ಯೆ:ಪೊಲೀಸರಿಗೆ ಖುದ್ದು ಶರಣಾಗತಿಯ ಮೆಸೇಜ್ ಕಳಿಸಿದ ಆರೋಪಿ-Times Of Karkala

ಬಂಟ್ವಾಳ ,ಅ.22:ತುಳು ಚಿತ್ರ ನಟ ಸುರೇಂದ್ರ ಬಂಟ್ವಾಳ ಹತ್ಯೆ ತಾನೇ ಮಾಡಿದ್ದು ಎಂದು ಸ್ವತಃ  ಆರೋಪಿಯೇ ದಕ್ಷಿಣ ಕನ್ನಡ ಪೋಲೀಸರ ಮೊಬೈಲ್ ಗೆ  ವಾಯ್ಸ್ ಮೆಸೇಜ್ ಕಳಿಸಿದ್ದಾನೆ ಎನ್ನಲಾಗಿದೆ.  



"ನಾನು ಸುರೇಂದ್ರನೊಂದಿಗೆ 22 ವರ್ಷಗಳಿಂದ ಇದ್ದೇನೆ. ಆತನ ಎಲ್ಲ ಅವ್ಯವಹಾರಗಳು ನನಗೆ ತಿಳಿದಿವೆ. ಸುರೇಂದ್ರ, ಕಿಶನ್ ಹೆಗ್ಡೆ ಕೊಲೆಗೆ ಸಹಾಯ ಮಾಡಿದ್ದ. ಇದು ಕಿಶನ್ ಹೆಗ್ಡೆ ಕೊಲೆಗೆ ಪ್ರತಿಕಾರ" ಎಂದು ವಾಯ್ಸ್ ಮೆಸೇಜ್ ನಲ್ಲಿ ತಿಳಿಸಿದ್ದಾನೆ. 

"ಸುರೇಂದ್ರ ಕಿಶನ್ ಹೆಗ್ಡೆ ಕೊಲೆಗೆ ಹಣ ಸಹಾಯ ಮಾಡಿದಾಗ ನಾನು ಬೇಡವೆಂದಿದ್ದೆ. ಆಗ ನನ್ನನ್ನೇ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ. ನಾನು ಕಿಶನ್ ಹೆಗ್ಡೆ ಸ್ನೇಹಿತನ ಜತೆ ಸೇರಿ ಕೊಲೆ ಮಾಡಿದ್ದೇನೆ. ಎರಡು ದಿನದಲ್ಲಿ ಪೋಲೀಸರ ಮುಂದೆ ಶರಣಾಗುತ್ತೇನೆ" ಎಂದಿದ್ದಾನೆ. 


ಸುರೇಂದ್ರ ಬಂಟ್ವಾಳ ಹತ್ಯೆ ಸೇಡಿನ ಪ್ರತಿಕವಾಗಿದ್ದು, ಇತ್ತೀಚಿಗೆ ಹತ್ಯೆಗೀಡಾದ ಉಡುಪಿ ಕಿಶನ್ ಹೆಗ್ಡೆ ಹತ್ಯೆಗೆ ಪ್ರತಿಕಾರ ಎಂದು ಆರೋಪಿ ಸತೀಶ್ ಕುಲಾಲ್ ವಾಯ್ಸ್ ಮೆಸೇಜ್ ನಲ್ಲಿ ಹೇಳಿದ್ದಾನೆ ಎನ್ನಲಾಗಿದೆ.





ಜಾಹೀರಾತು




https://www.timesofkarkala.in/2020/10/blog-post_8.html















Post a comment

MKRdezign

Contact form

Name

Email *

Message *

Powered by Blogger.
Javascript DisablePlease Enable Javascript To See All Widget