ಆರೋಗ್ಯಕರ ಜೀವನಶೈಲಿ ಕುರಿತಾಗಿನ ಸೆಮಿನಾರ್ ಯಶಸ್ವಿ-Times Of Karkala

ಕಾರ್ಕಳ,ಅ,8: ಆರೋಗ್ಯಕರ ಆಹಾರ, ಪೋಷಣೆ ಮತ್ತು ಆರೋಗ್ಯಕರ ಜೀವನಶೈಲಿಗಳ ಕುರಿತ ಸೆಮಿನಾರ್ ಅಕ್ಟೋಬರ್  11 ರ  ಭಾನುವಾರ ಬೆಳಿಗ್ಗೆ 10.30 ಕ್ಕೆ ಕಾರ್ಕಳದ ಕಟೀಲು ಇಂಟರ್ ನ್ಯಾಷನಲ್ ಹೋಟೆಲ್ ನಲ್ಲಿ  ಯಶಸ್ವಿಯಾಗಿ ನಡೆಯಿತು. ನೈಟ್‌ಹುಡ್  ಪ್ರಶಸ್ತಿ ವಿಜೇತ ಸರ್  ಡಾ. ಎಸ್.ಎಚ್. ​​ಕುಲಕರ್ಣಿ ಅವರು ಸೆಮಿನಾರ್ ನ ಮುಖ್ಯ ಭಾಷಣಕಾರರಾಗಿದ್ದರು.  


ಜನರು ಹೇಗೆ ಆರೋಗ್ಯಕರವಾಗಿ ಬದುಕಬಹುದು ಮತ್ತು ಉತ್ತಮ ಆಯ್ಕೆಗಳನ್ನು ಮಾಡಬಹುದು ಎಂಬ ವಿಷಯದ  ಮೇಲೆ ಸೆಮಿನಾರ್ ನಲ್ಲಿ ಉಪನ್ಯಾಸ ನೀಡಲಾಯಿತು. ತಜ್ಞರ ಸಹಾಯ ಪಡೆಯಲು ಮತ್ತು ಉತ್ತಮ ಜೀವನಶೈಲಿಯತ್ತ ಮೊದಲ ಹೆಜ್ಜೆ ಇಡಲು ಪ್ರೇರೇಪಿಸುವಂತಹ ಉಪಯುಕ್ತ ಸಲಹೆಗಳನ್ನು ಪಡೆಯಲು ಜನರಿಗೆ ಸೆಮಿನಾರ್ ಅದ್ಭುತ ಅವಕಾಶವನ್ನು ಕಲ್ಪಿಸಲಾಯಿತು.  ಯಾವುದೇ ಅನಾರೋಗ್ಯದಿಂದ ಚೇತರಿಸಿಕೊಳ್ಳುವುದು ಮತ್ತು ಔಷಧ  ಮುಕ್ತ ಜೀವನವನ್ನು ನಡೆಸುವುದು ಹೇಗೆ ಎನ್ನುವುದನ್ನು ಸೆಮಿನಾರಿನಲ್ಲಿ ಹೇಳಿಕೊಡಲಾಯಿತು. 
ಸೆಮಿನಾರ್ ಅನ್ನು ಇಎಮ್  ಡಬ್ಲ್ಯೂ ಐ  ಮಾರ್ಕೆಟಿಂಗ್ ಪ್ರಸ್ತುತ ಪಡಿಸಿತ್ತು. 


ಜಾಹೀರಾತು
https://www.timesofkarkala.in/2020/10/blog-post_8.html
Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget