ಪಿಲಿಕುಳ ಜೈವಿಕ ಉದ್ಯಾನವನದ 'ವಿಕ್ರಂ' ಇನ್ನಿಲ್ಲ -Times Of Karkala

ಗುರುಪುರ,ಅ.27: ಪಿಲಿಕುಳ ಜೈವಿಕ ಉದ್ಯಾನದ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದ 21 ವರ್ಷ ಪ್ರಾಯದ ಗಂಡು ಹುಲಿ ಸೋಮವಾರ ವಯೋಸಹಜ ಅನಾರೋಗ್ಯದಿಂದ ಮೃತಪಟ್ಟಿದೆ.


ಪಿಲಿಕುಳ ಮೃಗಾಲಯ ಆರಂಭವಾದ 2003ರಲ್ಲಿ ಶಿವಮೊಗ್ಗದ ತ್ಯಾವರೆಕೊಪ್ಪದಿಂದ ಇಲ್ಲಿಗೆ ತರಲಾಗಿದ್ದ ಮೂರು ಹುಲಿಗಳಲ್ಲಿ 'ವಿಕ್ರಂ' ಪ್ರಮುಖ ಆಕರ್ಷಣೆಯಾಗಿತ್ತು. ರಾಜ್(20) ಹಾಗೂ ನೇತ್ರಾ(22) ಹೆಸರಿನ ಹುಲಿಗಳು ಈ ಹಿಂದೆಯೇ ವಯೋಸಹಜ ಅನಾರೋಗ್ಯದಿಂದ ಮೃತಪಟ್ಟಿವೆ. ವಿಕ್ರಂ ಜೀವಿತಾವಧಿಯಲ್ಲಿ ಪಿಲಿಕುಳದಲ್ಲಿ ಕದಂಬ, ಕೃಷ್ಣ, ವಿನಯ, ಆಲಿವರ್, ಅಕ್ಷಯ್, ಮಂಜು, ಅಮರ್, ಅಕ್ಬರ್, ಅಂತೋನಿ ಹಾಗೂ ನಿಶಾ ಹೆಸರಿನ ಹುಲಿಗಳು ಜನ್ಮ ತಳೆದಿದ್ದವು. ಈ ಹುಲಿಗಳನ್ನು ರಾಜಸ್ತಾನ, ಗುಜರಾತ್, ತೆಲಂಗಾಣ ಹಾಗೂ ಮೈಸೂರು  ಮೃಗಾಲಯಗಳಿಗೆ ರವಾನಿಸಲಾಗಿದೆ. ಪಿಲಿಕುಳ ಮೃಗಾಲಯದಲ್ಲಿ ಈಗ ಒಟ್ಟು ೧೦ ಹುಲಿಗಳಿವೆ. 

ವಿಕ್ರಂ ಎರಡು ತಿಂಗಳಿಂದ ವೈದ್ಯಕೀಯ  ಚಿಕಿತ್ಸೆಯಲ್ಲಿತ್ತು. ಇತ್ತೀಚಿನವರೆಗೂ ಮೃಗಾಲಯದಲ್ಲಿ ತಿರುಗಾಡುತ್ತಿದ್ದ, ವಿಕ್ರಂಗೆ ದೃಷ್ಟಿಹೀನತೆ, ಸಂಧಿವಾತ ಹಾಗೂ ಮೂತ್ರಪಿಂಡಗಳಲ್ಲಿ ಸಮಸ್ಯೆ ಕಂಡುಬಂದಿತ್ತು. ಒಂದು ವಾರದಿಂದ ಆಹಾರ ತ್ಯಜಿಸಿದ್ದ, 'ವಿಕ್ರಂ'ಗೆ ಡ್ರಿಪ್ಸ್  ಹಾಕಿ ಆಂಟಿಬಯೋಟಿಕ್ ನೀಡಲಾಗುತ್ತಿತ್ತು. ಸಾಮಾನ್ಯವಾಗಿ ಹುಲಿಯೊಂದರ ಜೀವಿತಾವಧಿ 16-18 ವರ್ಷವಾಗಿದ್ದರೆ, ಇಲ್ಲಿ ಮಾತ್ರ 21-22 ವರ್ಷ ಬದುಕಿದೆ  ಎಂದು ಪಿಲಿಕುಳ ಜೈವಿಕ ಉದ್ಯಾನವನದ  ನಿರ್ದೇಶಕ ಜಯಪ್ರಕಾಶ್ ಭಂಡಾರಿ ತಿಳಿಸಿದ್ದಾರೆ.  


ಜಾಹೀರಾತುhttps://www.timesofkarkala.in/2020/10/blog-post_8.html

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget