ಬೆಳ್ಮಣ್‌:ಬೈಕ್ ಡಿಕ್ಕಿ,ಪಾದಚಾರಿಗೆ ಗಾಯ-Times of karkala

ಬೈಕ್ ಡಿಕ್ಕಿಯಾಗಿ ಪಾದಚಾರಿಯೊಬ್ಬರು ಗಾಯಗೊಂಡ ಘಟನೆ ಬೆಳ್ಮಣ್ ಪೇಟೆಯಲ್ಲಿ ದಿ.23 ರಂದು ನಡೆದಿದೆ.ಕಾರ್ಕಳ ಕಡೆಯಿಂದ ಪಡುಬಿದ್ರೆ  ಕಡೆಗೆ KA-20 –J – 3637 ನೇ ಹಿರೋ ಹೊಂಡಾ ಬೈಕ್ಅತೀ ವೇಗದಿಂದ ಬಂದು ರಸ್ತೆ ದಾಟಲು ಡಿವೈಡರ್ ಬಳಿ ನಿಂತಿದ್ದ ಗಂಗಾಧರ ಎಂಬುವವರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ಗಂಗಾಧರರವರಿಗೆ ಬಲಕಾಲಿನ ಮೂಳೆ ಮುರಿತ ಹಾಗೂ  ತಲೆಗೆ ಗಂಭೀರ  ಗಾಯವಾಗಿ  ಚಿಕಿತ್ಸೆಗಾಗಿ ಕೆ.ಎಂ.ಸಿ ಮಣಿಪಾಲಕ್ಕೆ  ದಾಖಲಿಸಲಾಗಿದೆ. ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

 

·         ಪೋಲೀಸ್ ವರದಿ:

·     ಕಾರ್ಕಳ : ದಿನಾಂಕ 23/10/2020 ರಂದು ಬೆಳಿಗ್ಗೆ 07:55 ಗಂಟೆಯ ಸಮಯಕ್ಕೆ ಕಾರ್ಕಳ ತಾಲೂಕು ಬೆಳ್ಮಣ್ ಗ್ರಾಮದ ಬೆಳ್ಮಣ್‌  ಬಸ್ನಿಲ್ದಾಣ ಎದುರು ಕಾರ್ಕಳ- ಪಡುಬಿದ್ರೆ ಹೆದ್ದಾರಿಯಲ್ಲಿ ಪಿರ್ಯಾದಿದಾರರಾದ ಸುನಿಲ್‌ (30), ತಂದೆ: ವಸಂತ ಪೂಜಾರಿ  , ವಾಸ: ಮಲೆಬೆಟ್ಟು  ದರ್ಖಾಸು ಮನೆ, ಕರಿಯನಂಗಡಿ ಬಳಿ, ಬೆಳುವಾಯಿ  ಅಂಚೆ ಮತ್ತು  ಗ್ರಾಮ ಮೂಡಬಿದ್ರೆ  ತಾಲೂಕು , ಜಿಲ್ಲೆ ಹಾಗೂ  ಅವರ  ಮಾವ ಶ್ರೀ ಗಂಗಾಧರ ಪೂಜಾರಿ (55) ಎಂಬುವವರು  ಮೂಲ್ಕಿ  ಬಪ್ಪನಾಡು  ದೇವಸ್ಥಾನಕ್ಕೆ  ಹೋಗುವ ಬಗ್ಗೆ ಬೆಳ್ಮಣ್‌  ಬಸ್‌  ನಿಲ್ದಾಣಕ್ಕೆ ಬರಲು  ಹೆದ್ದಾರಿಯಲ್ಲಿ  ನಿರ್ಮಿಸಲಾದ ಪ್ಲಾಸ್ಟಿಕ್ಡಿವೈಡರ್ಬಳಿ ನಿಂತು ಕೊಂಡಿರುವಾಗ ಕಾರ್ಕಳ ಕಡೆಯಿಂದ ಪಡುಬಿದ್ರೆ  ಕಡೆಗೆ KA-20 –J – 3637 ನೇ ಹಿರೋ ಹೊಂಡಾ ಬೈಕ್ಸವಾರ ಮನ್ವಿತ್ಶೆಟ್ಟಿ  ಎಂಬುವವರು  ತನ್ನ ಬೈಕನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ರಸ್ತೆಯ  ತೀರಾ  ಬಲ ಬದಿಗೆ ಚಲಾಯಿಸಿಕೊಂಡು ಬಂದು ಪಿರ್ಯಾದಾರರ ಮಾವನಿಗೆ ಡಿಕ್ಕಿ ಹೊಡೆದ ಪರಿಣಾಮ ಅವರ ಬಲಕಾಲಿನ ಮೂಳೆ ಮುರಿತ ಹಾಗೂ  ತಲೆಗೆ ರಕ್ತ  ಗಾಯವಾಗಿ  ಚಿಕಿತ್ಸೆ ಬಗ್ಗೆ ಉಡುಪಿ ಅಜ್ಜರಕಾಡು ಆಸ್ಪತ್ರೆಗೆ ದಾಖಲಿಸಿ ಅಲ್ಲಿಂದ ಹೆಚ್ಚಿನ  ಚಿಕಿತ್ಸೆಯ ಬಗ್ಗೆ ಕೆ.ಎಂ.ಸಿ ಮಣಿಪಾಲಕ್ಕೆ  ದಾಖಲಿಸಿರುವುದಾಗಿದೆ. ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 77 /2020 ಕಲಂ:  279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.


ಜಾಹೀರಾತು




https://www.timesofkarkala.in/2020/10/blog-post_8.html














Labels:

Post a comment

MKRdezign

Contact form

Name

Email *

Message *

Powered by Blogger.
Javascript DisablePlease Enable Javascript To See All Widget