ಮಂಗಳೂರು,ಅ.14 :ಕುದ್ರೋಳಿ ಬಳಿ ಮಾಂಸ ಮಾರಾಟ ಮಳಿಗೆಯಲ್ಲಿ ಕುರಿ ಮಾಂಸದ ಜತೆ ದನದ ಮಾಂಸ ಬೆರೆಸಿ ಮಾರಾಟ ಮಾಡುತ್ತಿದ್ದರೆಂಬ ಸಾರ್ವಜನಿಕರ ದೂರಿನ ಮೇಲೆ ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ದಿವಾಕರ ಪಾಂಡೇಶ್ವರ ನೇತೃತ್ವದಲ್ಲಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಯಾವುದೇ ಕಾರಣಕ್ಕೆ ಅಕ್ರಮವಾಗಿ ಮಾಂಸ ಮಾರಾಟ ಮಾಡಿದರೆ ಕ್ರಮ ಕೈಗೊಳ್ಳುವುದಾಗಿ ಸೂಚಿಸಿದ್ದಾರೆ. ಮಾಂಸ ಮಾರಾಟ ಮಳಿಗೆಗಳ ಮೇಲೆ ನಿಗಾ ಇಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ದಾಳಿಯ ವೇಳೆ ಕಸಾಯಿ ಖಾತೆ ಹಾಗೂ ಮಾರಾಟ ಮಳಿಗೆಗಳ ಪರವಾನಿಗೆಯನ್ನು ಪರಿಶೀಲಿಸಿದ ಅಧಿಕಾರಿಗಳು ಅಕ್ರಮವಾಗಿ ಮಾರಾಟ ಮತ್ತು ವಧೆ ನಡೆಸುತ್ತಿರುವವರ ಕುರಿತು ನಿಗಾ ಇರಿಸುವುದರ ಜತೆಗೆ ಮಾರಾಟ ಮಳಿಗೆಗಳಲ್ಲಿ ಮಾರಾಟವಾಗುತ್ತಿರುವ ಮಾಂಸಕ್ಕೆ ಸೀಲ್ ಮತ್ತು ಬಿಲ್ ನೀಡುವಂತೆ ಸೂಚಿಸಿದ್ದಾರೆ.
Post a comment