ಶಿರ್ವ:ಬ್ಲೇಡಿನಿಂದ ಕೈ ಕುಯ್ದುಕೊಂಡು ಆತ್ಮಹತ್ಯೆ ಮಾಡಿಕೊಂಡ ಮಹಿಳೆ-Times of karkala

ಮಹಿಳೆಯೋರ್ವರು ಬ್ಲೇಡಿನಿಂದ ಕೈ ಕುಯ್ದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಶಿರ್ವ ಗ್ರಾಮದ ಬಂಟಕಲ್ಲು ಎಂಬಲ್ಲಿ ನಡೆದಿದೆ. ಬಂಟಕಲ್ಲು ಅರಸಿಕಟ್ಟೆ, ನಿವಾಸಿ  ಪ್ರೇಮಾ(38) ರವರು ದಿನಾಂಕ 25ರಂದು ಬೆಳಿಗ್ಗೆ 11:30 ಗಂಟೆಗೆ ವಿಪರೀತ ಕುಡಿದು ಮನೆಯಲ್ಲಿ ಗಲಾಟೆ ಮಾಡಿದ್ದರು.ನಂತರ  ರಾತ್ರಿ 08.00 ಗಂಟೆಗೆ ಕುಡಿದ ಮತ್ತಿನಲ್ಲಿ ಗಲಾಟೆ ಮಾಡಿದಾಗ ಊಟ ಮಾಡಿ ಮಲಗಲು ಗಂಡ  ತಿಳಿಸಿದಾಗ ಕೋಪಗೊಂಡು ಮನೆಯ ಕೋಣೆಯ ಬಾಗಿಲನ್ನು ಹಾಕಿದ್ದು, ನಂತರ ಮನೆಯವರು ಬಾಗಿಲನ್ನು ತೆರೆಯುವಂತೆ ಹೇಳಿದಾಗ ನಶೆಯಲ್ಲಿದ್ದ ಪ್ರೇಮಾರವರು ಅಲ್ಲಿಯೇ ಇದ್ದ ಒಂದು ಬ್ಲೇಡಿನಲ್ಲಿ ಕೊಯ್ದಕೊಂಡಿದ್ದಾರೆ. ಇದರಿಂದ ವಿಪರೀತ ರಕ್ತಸ್ರಾವ ಉಂಟಾಗಿದೆ ಕೂಡಲೇ  ಪ್ರೇಮಾರವರನ್ನು ಉಡುಪಿ ಸರಕಾರಿ ಆಸ್ಪತ್ರೆಗೆ ಕರೆದುತಂದಿತ್ತಾದರೂ ವೈದ್ಯಾಧಿಕಾರಿಯವರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಶಿರ್ವಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.ಪೊಲೀಸ್ ವರದಿ:

ಶಿರ್ವಾ: ಪಿರ್ಯಾದಿದಾರರಾದ ರಮೇಶ (48),ತಂದೆ: ದಿ.ಅಂಗರ, ವಾಸ:1-179 ಕಲ್ಲಿ ಕುಮೇರಿ ಮನೆ  ಅರಸಿಕಟ್ಟೆ,ಬಂಟಕಲ್ಲು ಪೊಸ್ಟ್ ಶಿರ್ವ ಗ್ರಾಮ,ಕಾಪು ತಾಲೂಕು ಇವರ ಹೆಂಡತಿ  ಪ್ರೇಮಾ(38) ರವರು ದಿನಾಂಕ 25/10/2020 ರಂದು ಬೆಳಿಗ್ಗೆ 11:30 ಗಂಟೆಗೆ ವಿಪರೀತ ಕುಡಿದು ಮನೆಯಲ್ಲಿ ಗಲಾಟೆ ಮಾಡುತ್ತಿದ್ದು. ನಂತರ ಮನೆಯಲ್ಲಿ ಮಲಗಿದ್ದು ರಾತ್ರಿ 08.00 ಗಂಟೆಗೆ ಕುಡಿದ ಮತ್ತಿನಲ್ಲಿ ಗಲಾಟೆ ಮಾಡುತ್ತಿದ್ದು, ಊಟ ಮಾಡಿ ಮಲಗಲು ಪಿರ್ಯಾದಿದಾರರು ತಿಳಿಸಿದಾಗ ಕೋಪಗೊಂಡು ಮನೆಯ ಕೋಣೆಯ ಬಾಗಿಲನ್ನು ಹಾಕಿದ್ದು ನಂತರ ಮನೆಯವರು ಬಾಗಿಲನ್ನು ತೆರೆಯುವಂತೆ ಹೇಳಿದಾಗ ನಶೆಯಲ್ಲಿದ್ದ ಪ್ರೇಮಾರವರು ಅಲ್ಲಿಯೇ ಇದ್ದ ಒಂದು ಬ್ಲೇಡಿನಲ್ಲಿ ಕೊಯ್ದಕೊಂಡಿದ್ದು ಇದರಿಂದ ವಿಪರೀತ ರಕ್ತಸ್ರಾವ ಆಗಿರುತ್ತದೆ. ನಂತರ ಮನೆಯವರು ಚಿಕಿತ್ಸೆ ಬಗ್ಗೆ ಪ್ರೇಮಾರವರನ್ನು ಉಡುಪಿ ಸರಕಾರಿ ಆಸ್ಪತ್ರೆಗೆ ಕರೆತಂದಿದ್ದು, ವೈದ್ಯಾಧಿಕಾರಿಯವರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ದೃಡೀಕರಿಸಿರುತ್ತಾರೆ. ಈ ಬಗ್ಗೆ ಶಿರ್ವಾ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 22/2020 ಕಲಂ: 174 ಸಿ.ಆರ್‌.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 

ಜಾಹೀರಾತುhttps://www.timesofkarkala.in/2020/10/blog-post_8.html

Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget