ಮಾಳ:ಚಲಿಸುತ್ತಿದ್ದ ಬೈಕ್ ಗೆ ಅಡ್ಡ ಬಂದ ದನ,ಸಹ ಸವಾರಗೆ ಗಾಯ-Times of karkala

ಮಾಳ:ಅತೀ ವೇಗದಿಂದ ಚಲಿಸುತ್ತಿದ್ದ ಬೈಕ್ ಗೆ ಏಕಾಏಕಿ ದನ ಅಡ್ಡ ಬಂದ ಪರಿಣಾಮ ಬೈಕ್ ರಸ್ತೆಗೆ ಬಿದ್ದು ಸಹಸವಾರ  ಗಾಯಗೊಂಡ ಘಟನೆ ಮಾಳ ಗ್ರಾಮದ ಪೇರಡ್ಕದ ಅಂಗಡಿ ಎದುರು  ದಿನಾಂಕ 25 ರಂದುನಡೆದಿದೆ. 


ಅಕ್ಷತ್ ಎಂಬುವವರ ಬೈಕ್ ನಲ್ಲಿ ರಾಕೇಶ್ ಸಹಸವಾರರಾಗಿ ಕಾರ್ಕಳದ ಕಡೆ ತೆರಳುತ್ತಿದ್ದ ಸಂಧರ್ಭ ಪೇರಡ್ಕದಲ್ಲಿ ದನ ಅಡ್ಡ ಬಂದಿದೆ.ಪರಿಣಾಮ ಒಮ್ಮೇಲೆ ಬ್ರೇಕ್‌ ಹಾಕಿದ್ದು ಬೈಕ್‌ ರಸ್ತೆಗೆ ಅಡ್ಡ ಬಿದ್ದು ಸಹಸವಾರ ರಾಕೇಶ್ ರವರ ಬಲಕಾಲು ಮೂಳೆ ಮುರಿತಕ್ಕೊಳಗಾಗಿದೆ.ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ 

ಪೊಲೀಸ್ ವರದಿ 

ಕಾರ್ಕಳ: ದಿನಾಂಕ 25/10/2020 ರಂದು 18:45 ಗಂಟೆಗೆ ಪಿರ್ಯಾದಿದಾರರಾದ ರಾಕೇಶ್‌ ಪೂಜಾರಿ (21), ತಂದೆ: ವಿಠಲ ಪೂಜಾರಿ,  ವಾಸ: ರತ್ನಾ ನಿವಾಸ, ಕಡಾರಿ ಮುಡಾರು ಗ್ರಾಮ ಕಾರ್ಕಳ ತಾಲೂಕು ಇವರು ಕಾರ್ಕಳದಿಂದ ಮಾಳ ಗ್ರಾಮದ ಅಕ್ಷತ್‌ ಎಂಬುವವರ ಬೈಕ್‌ KA-20-ER-5921 ನಲ್ಲಿ ಮಾಳದಿಂದ ಕಾರ್ಕಳಕ್ಕೆ ಸವಾರನಾಗಿ ಅಕ್ಷತ್‌, ಸಹಸವಾರನಾಗಿ ಪಿರ್ಯಾದಿದಾರರು ಹೊರಟು ಬರುತ್ತಿದ್ದಾಗ ಕಾರ್ಕಳ ತಾಲೂಕು ಮಾಳ ಗ್ರಾಮದ ಪೇರಡ್ಕ ಸುರೇಶ್ ಭಟ್‌ ಎಂಬುವವರ ದಿನಸಿ ಅಂಗಡಿ ಎದುರು ಮಾಳ-ಕಾರ್ಕಳ ಹೆದ್ದಾರಿಯಲ್ಲಿ ಅತೀ ವೇಗ ಮತ್ತು ಅಜಾಗರೂಕತೆಯಿಂದ  ಚಲಾಯಿಸಿ ಬರುತ್ತಿದ್ದಾಗ ದನ ಅಡ್ಡ ಬಂದ ಪರಿಣಾಮ ಒಮ್ಮೇಲೆ ಬ್ರೇಕ್‌ ಹಾಕಿದ್ದು ಬೈಕ್‌ ರಸ್ತೆಗೆ ಅಡ್ಡ ಬಿದ್ದು ಪಿರ್ಯಾದಿದಾರರ ಬಲಕಾಲು ಮೂಳೆ ಮುರಿತವಾಗಿದ್ದಾಗಿ ಮತ್ತು ಸವಾರನಿಗೆ ಯಾವುದೇ ಗಾಯಗಳಾಗಿರುವುದಿಲ್ಲ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 79/2020 ಕಲಂ:  279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.      

ಜಾಹೀರಾತು



https://www.timesofkarkala.in/2020/10/blog-post_8.html













Labels:

Post a comment

MKRdezign

Contact form

Name

Email *

Message *

Powered by Blogger.
Javascript DisablePlease Enable Javascript To See All Widget