ತಾಯಿಯ ಹೆಸರಲ್ಲಿ ಐಎಎಸ್ ಆಕಾಂಕ್ಷಿಗಳ ನೆರವಿಗೆ ಮುಂದಾದ ಸೋನು ಸೂದ್-Times of karkala

ಮುಂಬೈ: ಬಡ ವಿದ್ಯಾರ್ಥಿಗಳ ಬಳಿಕ ಇದೀಗ ಬಾಲಿವುಡ್ ನಟ ಸೋನು ಸೂದ್ ತಮ್ಮ ತಾಯಿಯ ಹೆಸರಲ್ಲಿ ಐಎಎಸ್ ಆಕಾಂಕ್ಷಿಗಳ ನೆರವಿಗೆ ಮುಂದಾಗಿದ್ದಾರೆ.

ಹೌದು. ಅಕ್ಟೋಬರ್ 13 ಅಂದರೆ ನಿನ್ನೆ ಸೋನು ಸೂದ್ ತಾಯಿಯ ವರ್ಷದ ಪುಣ್ಯತಿಥಿಯಾಗಿದ್ದು, ಈ ವೇಳೆ ದೇಶದ ವಿವಿಧ ಭಾಗಗಳ ವಿದ್ಯಾರ್ಥಿಗಳ ಶಿಕ್ಷಣವನ್ನು ಪ್ರಾಯೋಜಿಸುವ ಉಪಕ್ರಮ ಕೈಗೊಂಡಿದ್ದಾರೆ. 

ಈ ಸಂಬಂಧ ಟ್ವೀಟ್ ಮಾಡಿರುವ ನಟ, ಅಕ್ಟೋಬರ್ 13ಕ್ಕೆ ನನ್ನ ತಾಯಿ ತೀರಿಕೊಂಡು 13 ವರ್ಷಗಳಾಗುತ್ತದೆ. ಶಿಕ್ಷಣ ಕ್ಷೇತ್ರದಲ್ಲಿ ನನ್ನ ತಾಯಿ ಸಾಕಷ್ಟು ಕೆಲಸ ಮಾಡಿದ್ದರು. ಇಂದು ಅವರ ಪುಣ್ಯಸ್ಮರಣೆಯಾಗಿದ್ದು, ಈ ಹಿನ್ನೆಲೆಯಲ್ಲಿ ಐಎಎಸ್ ಆಕಾಂಕ್ಷಿಗಳು ಪ್ರೊಫೆಸರ್ ಸರೋಜ್ ಸೂದ್ ವಿದ್ಯಾರ್ಥಿವೇತನಗಳ ಮೂಲಕ ತಮ್ಮ ಗುರಿ ತಲುಪಲು ಬೆಂಬಲ ನೀಡುವುದಾಗಿ ಪ್ರತಿಜ್ಞೆ ಮಾಡುತ್ತೇನೆ. ಈ ಮೂಲಕ ನಾನು ತಾಯಿಯ ಆಶೀರ್ವಾದ ಬೇಡುತ್ತೇನೆ, ಮಿಸ್ ಯು ಅಮ್ಮಾ.. ಎಂದು ಬರೆದುಕೊಂಡಿದ್ದಾರೆ.

ಈ ಪ್ರತಿಜ್ಞೆಯ ಮೂಲಕ ನಟ ತಮ್ಮ ದಿವಂಗತ ತಾಯಿಯ ಪ್ರೇರಣೆಯಿಂದ ಪ್ರೊಫೆಸರ್ ಸರೋಜ್ ಸೂದ್ ವಿದ್ಯಾರ್ಥಿವೇತನದ ಮೂಲಕ ಕನಸುಗಳನ್ನು ಸಾಕಾರಗೊಳಿಸಲು ನಿರೀಕ್ಷೆಯಲ್ಲಿರುವ ಐಎಎಸ್ ಆಕಾಂಕ್ಷಿಗಳ ಬೆಂಬಲಕ್ಕೆ ನಿಂತಿದ್ದಾರೆ. ಈ ಯೋಜನೆಯಂತೆ ವಿಶ್ವವಿದ್ಯಾನಿಲಯದೊಂದಿಗೆ ಸಂಯೋಜಿತ ಕಾರ್ಯಕ್ರಮದಡಿಯಲ್ಲಿ ವಿದ್ಯಾರ್ಥಿಗಳಿಗೆ ಆನ್‍ಲೈನ್ ಮತ್ತು ಕ್ಯಾಂಪಸ್ ಕೋರ್ಸ್ ಗಳಿಗೆ ವಿದ್ಯಾರ್ಥಿವೇತನ ಲಭ್ಯವಾಗಲಿದೆ. ವಿದ್ಯಾರ್ಥಿವೇತನ ಕಾರ್ಯಕ್ರಮವು ಅರ್ಹತೆ ಆಧಾರಿತವಾಗಿದೆ. ವಿಜಯವಾಡದಲ್ಲಿ ಕ್ಯಾಂಪಸ್‌ಗೆ ಲಭ್ಯವಿದೆ. ಈ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು 2020 ರ ಅಕ್ಟೋಬರ್ 20 ರೊಳಗೆ ಅರ್ಜಿ ಸಲ್ಲಿಸಬೇಕಾಗುತ್ತದೆ.  ಇದನ್ನೂ ಓದಿ: ಆನ್‍ಲೈನ್ ಕ್ಲಾಸಿಗೆ ಹಾಜರಾಗಲು ಮಕ್ಕಳಿಗೆ ಮೊಬೈಲ್ ಕಳುಹಿಸಿದ ಸೋನು ಸೂದ್

ಕೊರೊನಾ ವೈರಸ್ ದೇಶಕ್ಕೆ ವಕ್ಕರಿಸುತ್ತಿದ್ದಂತೆಯೇ ದೇಶಾದ್ಯಂತ ಲಾಕ್ ಡೌನ್ ಹೇರಲಾಗಿತ್ತು. ಈ ಸಂದರ್ಭದಲ್ಲಿ ಸಂಕಷ್ಟಕ್ಕೀಡಾಗಿದ್ದ ವಲಸೆ ಕಾರ್ಮಿಕರು, ವಿದೇಶದಲ್ಲಿರುವ ಭಾರತೀಯರಿಗೆ ನೆರವಾಗಿದ್ದರು. ಇಷ್ಟು ಮಾತ್ರವಲ್ಲದೆ ಆನ್ ಲೈನ್ ತರಗತಿ ಆರಂಭಿಸಿದ ಬಳಿಕವೂ ಅನೇಕ ವಿದ್ಯಾರ್ಥಿಗಳಿಗೆ ಸ್ಮಾರ್ಟ್ ಫೋನ್ ಗಳನ್ನು ನೀಡುವ ಮೂಲಕ ಸಕಾಯ ಮಾಡಿದ್ದರು. ಒಟ್ಟಿನಲ್ಲಿ ಒಂದಲ್ಲೊಂದು ರೀತಿಯಲ್ಲಿ ಸಹಾಯ ಮಾಡುತ್ತಿರುವ ನಟ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.


ಜಾಹೀರಾತು
https://www.timesofkarkala.in/2020/10/blog-post_8.html
Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget