ಮಂಗಳೂರು,ಅ,7: ಮಂಗಳೂರಿನ ಕಂದಾವರ ಗ್ರಾಮದ ಹೊಸಮನೆಯ ಸಂದೇಶ್ ಶೆಟ್ಟಿ ಇವರ ಮಗಳಾದ ಚರಿಷ್ಮಾಳ ವೈದ್ಯಕೀಯ ಚಿಕಿತ್ಸೆಗಾಗಿ ರೂಪಾಯಿ 40,000ಯ ಚೆಕ್ ಅನ್ನು ಬೆಳ್ಮಣ್ಣು ವಿಕಾಸ್ ಭಾರತ್ ಟ್ರಸ್ಟ್ ನ ಸದಸ್ಯರು ಹಸ್ತಾಂತರಿಸಿದರು.

3 ವರ್ಷದ ಮಗು ಚರಿಷ್ಮಾ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದು ಮಣಿಪಾಲದ ಕೆ.ಎಂ.ಸಿ ಆಸ್ಪತ್ರೆಯಲಿ ಚಿಕಿತ್ಸೆ ಪಡೆಯುತ್ತಿದಾಳೆ. ಚಿಕಿತ್ಸೆಗೆ ಸುಮಾರು ರೂ 7.ಲಕ್ಷ ಖರ್ಚು ಆಗಬಹುದು ಎಂದು ವೈದ್ಯರು ತಿಳಿಸಿದಾರೆ. ಮಗಳ ಹೆತ್ತವರು ಕೂಡ ಕೆಲಸಕ್ಕೆ ಹೋಗದೆ ಮಗಳ ಜೊತೆ ಆಸ್ಪತ್ರೆಯಲ್ಲಿ ಕಳೆಯುವಂತಾಗಿದೆ. ಇದುವರೆಗೂ ಮಗುವಿನ ಚಿಕಿತ್ಸೆಗೆ ಸುಮಾರು 4 ಲಕ್ಷ ಖರ್ಚು ಆಗಿದ್ದು ಯಾರಾದರೂ ದಾನಿಗಳು ಸಹಾಯ ಮಾಡಿ ಎಂದು ವಿಕಾಸ್ ಭಾರತ್ ಟ್ರಸ್ಟ್ (ರಿ)ಗೆ ಮನವಿ ಮಾಡಿದ್ದರು. ಮನವಿಯನ್ನು ಸ್ವೀಕರಿಸಿದ ಟ್ರಸ್ಟ್ ನ ಸದಸ್ಯರು ಈ ಯೋಜನೆಗೆ ಸ್ಪಂದಿಸಿದ್ದಾರೆ.
Post a comment