ಉಡುಪಿ:12 ಲಕ್ಷ ಆಸೆಗೆ 26 ಲಕ್ಷ ಕಳೆದುಕೊಂಡ ಬಗ್ಗೆ ವ್ಯಕ್ತಿಯೊಬ್ಬರು 1ವರ್ಷದ ಬಳಿಕ ದೂರು ನೀಡಿದ್ದಾರೆ. ಉಡುಪಿಯ ಕೆ. ನಾಗರಾಜ್ ಭಟ್ ಎಂಬುವವರಿಗೆ ಮಾರ್ಚ್ 29ರಂದು ನಾಪ್ಟಲ್(Naptol)ಕಂಪೆನಿಯ ಹೆಸರಿನಲ್ಲಿ 12 ಲಕ್ಷ ಸ್ಕ್ರಾಚ್ ಕಾರ್ಡ್ ಪೋಸ್ಟ್ ಮೂಲಕ ಬಂದಿದ್ದು ಅದನ್ನು ಡ್ರಾ ಮಾಡಲು ದಿನಾಂಕ 04.04.2019 ರಂದು ರೂ. 12,000/- ಪಾವತಿಸಿದ್ದರು.
ನಂತರ ಕೂಡಾ ಆರೋಪಿಗಳು ಬೇರೆ ಬೇರೆ ನಂಬ್ರಗಳಿಂದ ಕರೆ ಮಾಡಿ, ತಾವು ನ್ಯಾಪ್ಟಾಲ್ ಕಂಪನಿಯಿಂದ ಮಾತನಾಡುವುದು ನಂಬಿಸಿ, ನಿಮ್ಮ ಹಣವನ್ನು ಪಡೆಯಲು ಜಿ.ಎಸ್.ಟಿ. ಟ್ಯಾಕ್ಸ್, ವೆರಿಫಿಕೇಶ್ ಚಾರ್ಜ್, ಸಬ್ ಚಾರ್ಜ್ ಕಟ್ಟಬೇಕು ಎಂದು ಹೇಳಿ, ದಿನಾಂಕ 04.04.2019 ರಿಂದ ದಿನಾಂಕ 28.07.2019 ರ ಮದ್ಯಾವದಿಯಲ್ಲಿ ಕೆ. ನಾಗರಾಜ್ ಭಟ್ ಒಟ್ಟು ರೂ. 26,47,650/- ಹಣವನ್ನು ಆರೋಪಿಗಳ ವಿವಿಧ ಬ್ಯಾಂಕ್ ಖಾತೆಗಳಿಗೆ ಹಣವನ್ನುಪಾವತಿಸಿದ್ದಾರೆ, ವಿಜೇತ ಹಣವನ್ನು ನೀಡದೇ ಪಾವತಿಸಿದ ಹಣವನ್ನೂ ವಾಪಾಸು ನೀಡದೇ ನಂಬಿಸಿ, ಮೋಸ ಮಾಡಿ, ಹಣ ಪಡೆದು ವಂಚಿಸಿದ್ದಾರೆ.
ಈ ಬಗ್ಗೆ ಉಡುಪಿ ಸೆನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಪೊಲೀಸ್ ವರದಿ:ಉಡುಪಿ: ದಿನಾಂಕ 29.03.2019 ರಂದು ಪಿರ್ಯಾದಿ ಕೆ. ನಾಗರಾಜ್ ಭಟ್ ಇವರಿಗೆ Naptol ಕಂಪೆನಿಯ ಹೆಸರಿನಲ್ಲಿ ಒಂದು ಸ್ಕ್ರಾಚ್ ಕೂಪನ್ ಪೋಸ್ಟ್ ಮುಖೇನ ಬಂದಿದ್ದು, ಅದರಲ್ಲಿ 12 ಲಕ್ಷ ವಿಜೇತರಾಗಿದ್ದೀರಿ ಎಂಬುದಾಗಿ ನಮೂದಿದ್ದು, ಈ ಬಗ್ಗೆ ಪತ್ರದಲ್ಲಿದ ಮೊಬೈಲ್ ನಂಬ್ರಕ್ಕೆ ಕರೆ ಮಾಡಿದಲ್ಲಿ ಹಣವನ್ನು ಪಡೆಯುವರೆ ರಿಜಿಸ್ಟ್ರೇಶನ್ ಚಾರ್ಜ್ ಹಣ ಪಾವತಿಸುವಂತೆ ಅವರ ಬ್ಯಾಂಕ್ ಖಾತೆ ವಿವರ ನೀಡಿದ್ದು, ಅದರಂತೆ ಪಿರ್ಯಾದಿದಾರರು ದಿನಾಂಕ 04.04.2019 ರಂದು ರೂ. 12,000/- ಹಣವನ್ನು ಪಾವತಿಸಿರುತ್ತಾರೆ. ನಂತರದ ದಿನಗಳಲ್ಲಿ ಆರೋಪಿ 1.ಅಮಿತ್ ಬಿಸ್ವಾಸ 2.ಚೇತನ್ ಕುಮಾರ್ ಇವರುಗಳು ಬೇರೆ ಬೇರೆ ನಂಬ್ರಗಳಿಂದ ಕರೆ ಮಾಡಿ, ತಾವು ನ್ಯಾಪ್ಟಾಲ್ ಕಂಪನಿಯಿಂದ ಮಾತನಾಡುವುದು ಎಂದು ಪಿರ್ಯಾದಿದಾರರನ್ನು ನಂಬಿಸಿ, ನಿಮ್ಮ ಹಣವನ್ನು ಪಡೆಯಲು ಜಿ.ಎಸ್.ಟಿ. ಟ್ಯಾಕ್ಸ್, ವೆರಿಫಿಕೇಶ್ ಚಾರ್ಜ್, ಸಬ್ ಚಾರ್ಜ್ ಕಟ್ಟಬೇಕು ಎಂದು ಹೇಳಿ, ದಿನಾಂಕ 04.04.2019 ರಿಂದ ದಿನಾಂಕ 28.07.2019 ರ ಮದ್ಯಾವದಿಯಲ್ಲಿ ಪಿರ್ಯಾದಿದಾರರಿಂದ ಒಟ್ಟು ರೂ. 26,47,650/- ಹಣವನ್ನು ಆರೋಪಿಗಳ ವಿವಿಧ ಬ್ಯಾಂಕ್ ಖಾತೆಗಳಿಗೆ ಹಣವನ್ನು ಜಮೆ ಮಾಡಿಸಿಕೊಂಡು, ಪಿರ್ಯಾದಿದಾರರಿಗೆ ವಿಜೇತ ಹಣವನ್ನು ನೀಡದೇ ಪಾವತಿಸಿದ ಹಣವನ್ನೂ ವಾಪಾಸು ನೀಡದೇ ನಂಬಿಸಿ, ಮೋಸ ಮಾಡಿ, ಹಣ ಪಡೆದು ವಂಚಿಸಿರುವುದಾಗಿದೆ ಎಂಬಿತ್ಯಾದಿ. ಈ ಬಗ್ಗೆ ಉಡುಪಿ ಸೆನ್ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 61/2020 ಕಲಂ 66(c), 66(d) ಐ.ಟಿ.ಆಕ್ಟ್ ಮತ್ತು ಕಲಂ 420 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
Post a comment