ಉಡುಪಿ:ಇಬ್ಬರು ಬಾಲಕಿಯರಿಗೆ ಲೈಂಗಿಕ ಕಿರುಕುಳ:ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸಿದ ಪೊಲೀಸರು-Times of karkala

ಉಡುಪಿ, ಅ.14:ಬೈರಂಪಳ್ಳಿಯ ಪಾಲುಜೆಡ್ಡುವಿನಲ್ಲಿ ಇಬ್ಬರು ಬಾಲಕಿಯರಿಗೆ ಲೈಂಗಿಕ  ಕಿರುಕುಳ ನೀಡಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಮಂಗಳೂರಿನಲ್ಲಿ ಪೋಕ್ಸೋ ಕಾಯಿದೆಯಡಿ ಪೊಲೀಸರು ಸೋಮವಾರ ಬಂಧಿಸಿದ್ದಾರೆ. ಬೈರಂಪಳ್ಳಿಯ ಪ್ರದೀಪ್ ಶೆಟ್ಟಿ(39) ಬಂಧಿತ ಆರೋಪಿ. ಆತನ ವಿರುದ್ಧ 2018ರಲ್ಲಿ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಲೈಂಗಿಕ ಕಿರುಕುಳ ಪ್ರಕರಣ ದಾಖಲಾಗಿದ್ದು, ನ್ಯಾಯಾಲಯದಲ್ಲಿ ವಿಚಾರಣೆಯ ಹಂತದಲ್ಲಿದೆ. 

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್ ವಿಷ್ಣುವರ್ಧನ್ ಮಾರ್ಗದರ್ಶನದಂತೆ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮರಚಂದ್ರ ಮಾರ್ಗದರ್ಶನದಂತೆ ಪ್ರಕರಣದ ತನಿಖಾಧಿಕಾರಿಯಾದ ಪೊಲೀಸ್ ಉಪಾಧೀಕ್ಷಕ ಟಿ ಆರ್  ಜೈಶಂಕರ್ 3 ವಿಶೇಷ ತಂಡಗಳನ್ನು ರಚಿಸಿದ್ದರು. ಆರೋಪಿ ಪತ್ತೆ ಕಾರ್ಯಾಚರಣೆಯಲ್ಲಿ ಬ್ರಹ್ಮಾವರ ವೃತ್ತ ನಿರೀಕ್ಷಕ ಅನಂತಪದ್ಮನಾಭ, ಡಿಸಿಐಬಿ ಪಿ ಐ ಮಂಜಪ್ಪ, ಬ್ರಹ್ಮಾವರ ಠಾಣೆಯ ಪಿಎಸ್ಐ ರಾಘವೇಂದ್ರ, ಹಿರಿಯಡ್ಕ ಠಾಣೆಯ ಪಿಎಸ್ ಐ ಸುಧಾಕರ ತೋನ್ಸೆ, ಕಾರ್ಕಳ ನಗರ ಠಾಣೆಯ ಪಿ ಎಸ್ ಐ ಮಧು  ಬಿಇ, ಸಿಬ್ಬಂದಿಗಳಾದ ಎಎಸ್ಐ ಯೋಗೀಶ್, ಜಯಂತ್, ಎಚ್ ಸಿ ವೆಂಕಟರಮಣ, ಚಂದ್ರ ಶೆಟ್ಟಿ, ರತ್ನಾಕರ ಶೆಟ್ಟಿ, ಲೋಕೇಶ್, ಪ್ರವೀಣ್ ಶೆಟ್ಟಿಗಾರ್, ಡಿಸಿಐಬಿ ತಂಡ ಮತ್ತು ಚಾಲಕರಾದ ಶಾಂತಾರಾಮ ಅಣ್ಣಪ್ಪ, ಆನಂದ, ಶೇಖರ ಕಾರ್ಯಾಚರಣೆಯಲ್ಲಿ ಸಹಕರಿಸಿದ್ದಾರೆ. 

ಜಾಹೀರಾತು
https://www.timesofkarkala.in/2020/10/blog-post_8.html


Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget