ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ,ಮಂಗಳೂರು ವಿವಿಯ ಅರ್ಥಶಾಸ್ತ್ರ ವಿಭಾಗದ ಪ್ರೊ.ಅರಬಿ ಅಮಾನತು-Times of karkala

ಮಂಗಳೂರು ವಿವಿಯ ಸಂಶೋಧನಾ ವಿದ್ಯಾರ್ಥಿನಿಯ ಮೇಲೆ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ವಿವಿಯ ಅರ್ಥಶಾಸ್ತ್ರ ವಿಭಾಗದ ಪ್ರೊ.ಅರಬಿ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.ವಿಶ್ವವಿದ್ಯಾಲಯದ ಸಿಂಡಿಕೇಟ್ ಸಭೆಯಲ್ಲಿ ತೆಗೆದುಕೊಂಡ ನಿರ್ಧಾರದಂತೆ ಈ ಕ್ರಮ ಕೈಗೊಳ್ಳಲಾಗಿದೆ. 


 ವಿದ್ಯಾರ್ಥಿನಿ 2018ರಲ್ಲಿ ಸಾಕ್ಷಿ ಸಮೇತ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಳು. ವಿವಿ ಆಡಳಿತದ ಸಮಿತಿ ತನಿಖೆ ಕೈಗೊಂಡ ನಂತರ ವರದಿಯನ್ನು ಅಂದಿನ ಕುಲಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದ ಎ.ಎಂ ಖಾನ್‌ ಅವರಿಗೆ ಸಲ್ಲಿಸಲಾಗಿತ್ತು. ಆದರೆ, ವರದಿ ಸಲ್ಲಿಸಿದರೂ ಕೂಡಾ ಅದನ್ನು ಪ್ರಕಟಿಸುವ ಬದಲು ಮುಚ್ಚಿಟ್ಟಿದ್ದರು ಎನ್ನಲಾಗಿದೆ. ಇತ್ತೀಚೆಗೆ ಮಹಿಳಾ ಆಯೋಗ ವರದಿ ಕೇಳಿದ್ದ ಕಾರಣ ಸಿಂಡಿಕೇಟ್‌ ಎದುರು ವರದಿಯನ್ನು ಪ್ರಸ್ತಾಪ ಮಾಡಲಾಗಿತ್ತು. ವರದಿಯಲ್ಲಿ ಪ್ರೊ.ಅರಬಿ ಅವರು ತಪ್ಪಿತಸ್ಥ ಎಂದು ತಿಳಿದುಬಂದಿದ್ದು, ಅವರನ್ನು ಸೇವೆಯಿಂದ ವಜಾಗೊಳಿಸುವ ತೀರ್ಮಾನ ಕೈಗೊಳ್ಳಲಾಗಿದೆ. ಪ್ರೊ.ಅರಬಿ ವಿರುದ್ದ ಮಾತ್ರವಲ್ಲದೇ, ಅಂದಿನ ಕುಲಸಚಿವರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಎ.ಎಂ ಖಾನ್‌ ಅವರ ವಿರುದ್ದವೂ ಕ್ರಮ ಕೈಗೊಳ್ಳಲು ಸಿಂಡಿಕೇಟ್‌‌ ತೀರ್ಮಾನಿಸಿದೆ.

ಪ್ರೊ.ಅರಬಿ ಅವರನ್ನು ವಜಾಗೊಳಿಸುವ ತೀರ್ಮಾನದೊಂದಿಗೆ ಎ ಎಂ ಖಾನ್‌‌ ವಿರುದ್ದ ಸರ್ಕಾರಕ್ಕೆ ದೂರು ನೀಡಲು ತೀರ್ಮಾನ ಕೈಗೊಳ್ಳಲಾಗಿದೆ.




https://www.timesofkarkala.in/2020/10/blog-post_8.html







Post a comment

MKRdezign

Contact form

Name

Email *

Message *

Powered by Blogger.
Javascript DisablePlease Enable Javascript To See All Widget