ನಗದು ರಹಿತ ವ್ಯವಹಾರ:
ನಗದು ರಹಿತ ವ್ಯವಹಾರಕ್ಕೆ ಕ್ರಮವಹಿಸಲಾಗಿದೆ ಸಾರ್ವಜನಿಕರು ಕ್ರೆಡಿಟ್ ಕಾರ್ಡ್ ಮೂಲಕವೇ ತೆರಿಗೆ ಪಾವತಿಸುತ್ತಾರೆ.ನೀರಿನ ದರವನ್ನು ಕಂಪ್ಯೂಟರ್ ಬಿಲ್ಲಿಂಗ್ ಮೂಲಕ ನೀಡುವುದು ಮತ್ತು ವಸೂಲಾತಿ ಮಾಡಲಾಗುತ್ತಿದೆ.ಯುವ ಪೇ ಆಪ್ ಮೂಲಕ ತೆರೆಗೆ ವಸೂಲಾತಿಗೆ ಆ್ಯಪ್ ಬಳಸಲಾಗುತ್ತಿದೆ.ನೀರಿನ ದರವನ್ನು ಕಂಪ್ಯೂಟರೀಕರಣಗೊಳಿಸಿದ ಬಳಿಕ ಸುಮಾರು ಶೇಕಡ ೧೦೦ ವಸೂಲಾತಿ ಆಗುತ್ತಿದೆ.
ಸ್ವಯಂ ಚಾಲಿತ ಬೀದಿ ದೀಪಗಳು :
ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಬೀದಿ ದೀಪಗಳಿಗೆ ಟೈಮರ್ ಅಳವಡಿಸಿದ್ದು ನಿಗದಿತ ಸಮಯದಲ್ಲಿ ಚಾಲನೆಗೊಳ್ಳುತ್ತಿದೆ. ಇದರಿಂದ ವಿದ್ಯುತ್ ಅಪವ್ಯಯ ತಪ್ಪುತ್ತಿದೆ.ಎಲ್ಲಾ ಬೀದಿ ದೀಪಗಳನ್ನು ಸ್ವಯಂ ಚಾಲನೆಯಲ್ಲಿ ಇರಿಸಲಾಗಿದೆ.
ಕುಡಿಯುವ ನೀರಿನ ಮೋಟರ್ ಗಳಿಗೆ ಮಿಸ್ ಕಾಲ್ ಸ್ಟಾಟರ್ ಅಳವಡಿಕೆ.
ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಡಿಯುವ ನೀರಿನ ಮೋಟರ್ ಗಳಿಗೆ ಮಿಸ್ ಕಾಲ್ ಸ್ಟಾಟರ್ ಅಳವಡಿಸಿ ಆನ್ ಆಪ್ ಮಾಡಲಾಗುತ್ತಿದೆ. ನೀರಿನ ಮತ್ತು ವಿದ್ಯುತ್ ಅಪವ್ಯಯ ತಪ್ಪಿಸಿ ಎಲ್ಲಾ ಸಮಯದಲ್ಲೂ ನೀರಿನ ಟ್ಯಾಂಕ್ ಗಳನ್ನು ಭರ್ತಿಗೊಳಿಸಲಾಗುತ್ತಿದೆ.
ಗ್ರಾಮ ಪಂಚಾಯತಿನ ಸುತ್ತ ವೈಫೈ ವ್ಯವಸ್ಥೆ:
ಗ್ರಾಮ ಪಂಚಾಯತಿನಿಂದ ಸೂಕ್ತ ವೈಫೈ ವ್ಯವಸ್ಥೆ ಮಾಡಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ.
ಮಾದರಿ ಗ್ರಾಮ ಪಂಚಾಯಿತಿ :
ಗ್ರಾಮ ಪಂಚಾಯತಿಯಲ್ಲಿ ಆಧುನಿಕ ಮೂಲ ಸೌಲಭ್ಯಗಳು ಇದ್ದಲ್ಲಿ ಗ್ರಾಮ ಪಂಚಾಯಿತಿ ಆಡಳಿತ ದಕ್ಷತೆಯಿಂದ ಕರ್ತವ್ಯ ನಿರ್ವಹಿಸಬಹುದು . ಸಾರ್ವಜನಿಕರಿಗೆ ಉತ್ತಮ ಗುಣಮಟ್ಟದ ಸೇವೆ ಒದಗಿಸಲು ಸಾಧ್ಯವಿದೆ ಎಂಬುದಕ್ಕೆ ವರಂಗ ಗ್ರಾಮ ಪಂಚಾಯಿತಿ ಸಾಕ್ಷಿಯಾಗಿದೆ. ಸೇವಾ ಕಾರ್ಯ ಇತರ ಗ್ರಾಮ ಪಂಚಾಯಿತಿಗಳಿಗೆ ಮಾದರಿಯಾಗಿದೆ. ಸರ್ಕಾರದ ಅನುದಾನಕ್ಕಾಗಿ ಕಾಯದೇ ಸಾರ್ವಜನಿಕರ ಸಹಕಾರ ಪಡೆದು ದೇಣಿಗೆಯನ್ನು ಸಂಗ್ರಹಿಸಿಯೂ ಸಕಲ ಸೌಲಭ್ಯವನ್ನು ಹೊಂದಲು ಸಾಧ್ಯವಿದೆ ಎಂಬುದಕ್ಕೆ ಕೂಡ ನಿದರ್ಶನವಾಗಿದೆ.
ಪ್ರಶಸ್ತಿಯಲ್ಲೂ ಹ್ಯಾಟ್ರಿಕ್ ಸಾಧನೆ :
ವರಂಗ ಗ್ರಾಮ ಪಂಚಾಯಿತಿಗೆ ೨೦೧೫,೨೦೧೬,೨೦೧೭ರಲ್ಲಿ ಮತ್ತು ಇದೀಗ ೨೦೨೦ರಲ್ಲಿ ಸೇರಿ ೪ ಭಾರಿ ಗಾಂಧಿಗ್ರಾಮ ಪುರಸ್ಕಾರ ಸಂದಿದೆ. ನೈರ್ಮಲ್ಯ ಗ್ರಾಮ ಪುರಸ್ಕಾರ, ಕೋಟ ಶಿವರಾಮ ಕಾರಂತ ಪ್ರಶಸ್ತಿ ಸಹಿತ ಅನೇಕ ಗೌರವಗಳು ವರಂಗ ಗ್ರಾಮ ಪಂಚಾಯಿತಿಗೆ ಸಂದಿದೆ.
Post a comment