ಬಜರಂಗದಳ ನಿಟ್ಟೆ ವಲಯ ವೀರಕೇಸರಿ ಘಟಕ ಪರಪ್ಪಾಡಿ ಇದರ ನೂತನ ಜವಾಬ್ದಾರಿ ಘೋಷಣೆ-Times of karkala

ನಿಟ್ಟೆ:ವಿಶ್ವ ಹಿಂದೂ ಪರಿಷದ್ ಬಜರಂಗದಳ ನಿಟ್ಟೆ ವಲಯ ವೀರಕೇಸರಿ ಘಟಕ ಪರಪ್ಪಾಡಿ ಇದರ ನೂತನ ಜವಾಬ್ದಾರಿ ಘೋಷಣೆ ಆದಿತ್ಯವಾರ ಸಂಜೆ 4 ಗಂಟೆಗೆ ಶ್ರೀ ಕೇಶವ ಭಜನಾ ಮಂದಿರ ಪರಪ್ಪಾಡಿಯಲ್ಲಿ ನಡೆಯಿತು. "ಸಂಘಟನೆಯ ಘಟಕಗಳು ಹಿಂದೂ ಸಮಾಜದ ಸವಾಲುಗಳಿಗೆ ತಕ್ಕ ಉತ್ತರವಾಗಿದೆ, ವಿಶ್ವ ಹಿಂದೂ ಪರಿಷದ್ ಬಜರಂಗದಳದ ಘಟಕಗಳು ಇಲ್ಲದೆ ಹೋದರೆ ಹಿಂದೂಗಳ ಪರಿಸ್ಥಿತಿ ಯಾವ ಮಟ್ಟಕ್ಕೆ ತಲುಪುತಿತ್ತೊ ಎಂಬುದನ್ನು ಊಹಿಸಲು ಅಸಾಧ್ಯ. ನನ್ನ ಘಟಕದಲ್ಲಿ ಯಾವುದೇ ಗೋ ಹತ್ಯೆ, ಮತಾಂತರ, ಲವ್ ಜಿಹಾದಿನಂತಹ ಕೃತ್ಯಗಳಿಗೆ ಅವಕಾಶ ನೀಡುವುದಿಲ್ಲ ಹಾಗೂ ಹಿಂದೂಗಳ ಸ್ವಾಭಿಮಾನಕ್ಕೆ ದಕ್ಕೆಯಾದರೆ ಕೈಕಟ್ಟಿ ಕುಳಿತುಕೊಳ್ಳುವ ಪ್ರಶ್ನೆಯೇ ಇಲ್ಲ ಎನ್ನುವುದರ ಮೂಲಕ ನಾವು ಕಾರ್ಯಪ್ರವೃತ್ತರಾಗಬೇಕು."ಎಂದು ಬಜರಂಗದಳ ಕರ್ನಾಟಕ ದಕ್ಷಿಣ ಪ್ರಾಂತ ಸಂಯೋಜಕರಾದ ಸುನಿಲ್ ಕೆ ಆರ್ ದಿಕ್ಸೂಚಿ ಭಾಷಣ ಮಾಡಿದರು. 

ಪ್ರಖಂಡ ಸಂಚಾಲಕ್ ಚೇತನ್ ಪೇರಲ್ಕೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಖಂಡ ಸಹ ಕಾರ್ಯದರ್ಶಿ ಸುಧಿರ್ ನಿಟ್ಟೆ ನೂತನ ಜವಾಬ್ದಾರಿ ಘೋಷಣೆ ಮಾಡಿದರು.

ಪ್ರಖಂಡ ವಿಶ್ವ ಹಿಂದೂ ಪರಿಷದ್ ಉಪಾಧ್ಯಕ್ಷ ಅಶೋಕ್ ಪಾಲಡ್ಕ, ನಿಟ್ಟೆ ವಲಯ ಸಂಚಾಲಕ್ ಪ್ರಣಯ್ ನಿಟ್ಟೆ, ವೀರಕೇಸರಿ ಘಟಕ ವಿಶ್ವ ಹಿಂದೂ ಪರಿಷದ್ ಅಧ್ಯಕ್ಷ ಜೀವಂಧರ್ ಜೈನ್, ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಮುಖರಾದ ಸುರೇಶ್ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ವೀರಕೇಸರಿ ಘಟಕ ಪರಪ್ಪಾಡಿ ಇದರ ಬಜರಂಗದಳ ಸಂಚಾಲಕರಾಗಿ ಸಚಿನ್, ವಿಶ್ವ ಹಿಂದೂ ಪರಿಷದ್ ಉಪಾಧ್ಯಕ್ಷರಾಗಿ ಸುರೇಂದ್ರ ಅಮೀನ್, ಕಾರ್ಯದರ್ಶಿಯಾಗಿ ನಾಗೇಶ್, ಆಯ್ಕೆಯಾದರು. 

ಮನೀಷ್ ನಿಟ್ಟೆ ಸ್ವಾಗತಿಸಿ, ಪುನೀತ್ ನಿಟ್ಟೆ ವಂದಿಸಿದರು. ಶೈಲೇಶ್ ಸಾಣೂರು ಕಾರ್ಯಕ್ರಮ ನಿರೂಪಿಸಿದರು.

ಜಾಹೀರಾತುhttps://www.timesofkarkala.in/2020/10/blog-post_8.html


Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget