ಎಂಪಿಎಂ ಕಾಲೇಜಿನಲ್ಲಿ ಫಿಟ್ನೆಸ್ ಕುರಿತಾಗಿ ರಾಷ್ಟ್ರ ಮಟ್ಟದ ವೆಬಿನಾರ್-Times Of Karkala

ಕಾರ್ಕಳ,ಅ.22: ಮಂಜುನಾಥ ಪೈ ಸ್ಮಾರಕ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ   ಶನಿವಾರದಂದು (24/10/2020) ಬೆಳಿಗ್ಗೆ 11 ಗಂಟೆಗೆ  ರಾಷ್ಟ್ರ  ಮಟ್ಟದ ವೆಬಿನಾರ್ ಜರಗಲಿದೆ. 'ಫಿಟ್ನೆಸ್ ಹಾಗೂ ರೋಗನಿರೋಧಕತೆ ವೃದ್ಧಿಗೆ ಕ್ರೀಡೆ ಮತ್ತು ದೈಹಿಕ ಶಿಕ್ಷಣ' ಎಂಬ ವಿಷಯದ ಕುರಿತಾಗಿನ ಸೆಮಿನಾರ್ ಇದಾಗಿದ್ದು, ಆಸಕ್ತರಿಗೆ ನೋಂದಾವಣಿಗೆ ಅವಕಾಶವಿದೆ.  


ಡಾ ಅನಿಂದಿತ ದಾಸ್,  ಅಸೋಸಿಯೇಟ್  ಪ್ರೊಫೆಸರ್, ಆರೋಗ್ಯ ವಿಜ್ಞಾನ ವಿಭಾಗ ,ಎಲ್ ಎನ್ ಐ ಪಿ ಇ, ಗ್ವಾಲಿಯರ್  ಇವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ. 


ಮಂಗಳೂರು ವಿವಿಯ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕರಾಗಿರುವ ಡಾ ಕಿಶೋರ್ ಕುಮಾರ್ ಸಿ.ಕೆ. ಮುಖ್ಯ ಭಾಷಣ ಮಾಡಲಿದ್ದು  ಮಂಜುನಾಥ ಪೈ ಸ್ಮಾರಕ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಶ್ರೀವರ್ಮ ಅಜ್ರಿ ಅವರು ಸ್ವಾಗತ ಮತ್ತು ಪ್ರಾಸ್ತಾವಿಕ ಭಾಷಣ ಮಾಡಲಿದ್ದಾರೆ.

ಪಿಸಿಕಲ್ ಎಜುಕೇಶನ್ ಫೌಂಡೇಶನ್ ಇಂಡಿಯಾದ ಕರ್ನಾಟಕ ವಿಭಾಗದ ಕಾರ್ಯದರ್ಶಿ ಶ್ರೀಕಾಂತ್ ಆರ್. ರವರು ಸಮಾರೋಪ ಭಾಷಣ ಮಾಡಲಿದ್ದಾರೆ. ಸ್ನಾತಕೋತ್ತರ ವಿಭಾಗದ ಸಂಚಾಲಕರಾದ   ವಿದ್ಯಾಧರ  ಹೆಗ್ಡೆ ಎಸ್.  ಸಂಪನ್ಮೂಲ  ವ್ಯಕ್ತಿಯ ಪರಿಚಯ  ಮಾಡಲಿದ್ದು, ವಾಣಿಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥೆ ಪ್ರೊ ಜ್ಯೋತಿ ಎಲ್ ಜನ್ನೆ ಕಾರ್ಯಕ್ರಮ ನಿರ್ವಹಣೆ ಮಾಡಲಿದ್ದಾರೆ. ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಕೃಷ್ಣಮೂರ್ತಿ ವೈದ್ಯ ಧನ್ಯವಾದಗೈಯ್ಯಲಿದ್ದಾರೆ.

ನೋಂದಾಯಿತ ಅಭ್ಯರ್ಥಿಗಳಿಗೆ ಇ ಸರ್ಟಿಫಿಕೇಟ್ ಸಿಗಲಿದೆ. ನೋಂದಾವಣೆಗೆ ಕೊನೆಯ ದಿನಾಂಕ 23/10/2020 ಸಮಯ 11 ಗಂಟೆ.

ಜಾಹೀರಾತು
https://www.timesofkarkala.in/2020/10/blog-post_8.html

Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget