ಉಡುಪಿ, ಅ.26:ಹಿರಿಯಡ್ಕದಲ್ಲಿ ಮಹಿಳೆಯೊಬ್ಬರು ಪ್ರಮಾದವಶಾತ್ ಇಲಿ ಪಾಷಾನಾ ಬೆರೆಸಿಟ್ಟಿದ್ದ ಪಪ್ಪಾಯ ಸೇವಿಸಿ ಮೃತಪಟ್ಟಿದ್ದಾರೆ. ಕುದಿ ಗ್ರಾಮದ ದೇವರಗುಂಡದ ನಿವಾಸಿ ಶ್ರೀಮತಿ(43) ಮೃತಪಟ್ಟವರು.
ಮನೆಯಲ್ಲಿ ಇಲಿಗಳ ವಿಪರೀತ ಕಾಟ ಇರುವುದರಿಂದ ಅಕ್ಟೋಬರ್ 19ರಂದು ಮನೆಯಲ್ಲಿ ಪಪ್ಪಾಯಿ ಹಣ್ಣಿನಲ್ಲಿ ಇಲಿ ಪಾಶಾಣವನ್ನು ಹಾಕಿಟ್ಟಿದ್ದರು. ಶ್ರೀಮತಿಯವರು ಕಣ್ತಪ್ಪಿನಿಂದ ಮಧ್ಯಾಹ್ನ ಅದೇ ಪಪ್ಪಾಯಿ ಹಣ್ಣುನ್ನು ತಿಂದಿದ್ದು, ಇದರಿಂದಾಗಿ ಅವರಲ್ಲಿ ಹೊಟ್ಟೆನೋವು ಕಾಣಿಸಿಕೊಂಡಿತ್ತು. ಬಳಿಕ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಅವರು ಚಿಕಿತ್ಸೆ ಫಲಕಾರಿಯಾಗದೆ ಅಕ್ಟೋಬರ್ 24 ರಂದು ಮೃತಪಟ್ಟಿದ್ದಾರೆ. ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Post a comment