ಡಿಸೆಂಬರ್ 15 ರ ನಂತರ ಯಾಹೂ ಕಾರ್ಯಾಚರಣೆ ಸ್ಥಗಿತ-Times Of Karkala

ನವದೆಹಲಿ,ಅ.15: ಕಳೆದ  ಕೆಲ   ವರ್ಷಗಳಿಂದ     ಬಳಕೆದಾರರ   ಸಂಖ್ಯೆ    ನಿರಂತರ    ಕುಸಿದಿರುವ ಕಾರಣ ಡಿಸೆಂಬರ್ 15ರಿಂದ ಕಾರ್ಯಾಚರಣೆ ಸ್ಥಗಿತಗೊಳಿಸಲು ಯಾಹೂ ನಿರ್ಧರಿಸಿದೆ. 2017ರಲ್ಲಿ ಯಾಹೂವನ್ನು ಖರೀದಿಸಿರುವ ಅಮೇರಿಕಾದ ಬಹುರಾಷ್ಟ್ರೀಯ  ಕಂಪನಿ ವೆರಿಜಾನ್ ಮಂಗಳವಾರ ತನ್ನ ನಿರ್ಧಾರ ಪ್ರಕಟಿಸಿದೆ. 
ಕಳೆದ ಕೆಲ ವರ್ಷಗಳಿಂದ ಯಾಹೂ ಗ್ರೂಪ್ ಬಳಕೆದಾರರ ಸಂಖ್ಯೆ ನಿರಂತರವಾಗಿ ಇಳಿಮುಖವಾಗುತ್ತಿದೆ. ಇದೇ ಅವಧಿಯಲ್ಲಿ ನಮ್ಮ ಗ್ರೂಪ್ ಸೈಟ್ಗಳಲ್ಲಿ  ವಿಶ್ವಾಸಾರ್ಹ ವಿಷಯಗಳನ್ನು ಹುಡುಕುವ ಅವಧಿ ಹೆಚ್ಚಾಗಿದ್ದನ್ನೂ ಕಂಡಿದ್ದೇವೆ ಎಂದು ಕಂಪೆನಿ ತಿಳಿಸಿದೆ.
"ಈ ನಿರ್ಧಾರ ಸುಲಭದ್ದಾಗಿರಲಿಲ್ಲ. ದೀರ್ಘಕಾಲದ ಉದ್ಯಮ ಕಾರ್ಯತಂತ್ರಕ್ಕೆ ಹೊಂದಿಕೆಯಾಗದ ಉತ್ಪನ್ನಗಳ ಬಗ್ಗೆ ನಾವು ಕೆಲವೊಮ್ಮೆ ಕಠಿಣ ನಿರ್ಧಾರ ಕೈಗೊಳ್ಳಬೇಕಾಗುತ್ತದೆ. ಉದ್ಯಮದ ಇತರ ಕ್ಷೇತ್ರಗಳತ್ತ ಗಮನ ಹರಿಸಬೇಕಿದೆ" ಎಂದೂ ಕಂಪನಿ ಹೇಳಿದೆ. 
ಯಾಹೂ ಗ್ರೂಪ್ 2001ರಲ್ಲಿ ತನ್ನ ಸೇವೆ ಆರಂಭಿಸಿತ್ತು. 
ಡಿಸೆಂಬರ್ 15 ರ ನಂತರ ಯಾಹೂ ಗ್ರೂಪ್ ಈ ಮೇಲ್ ಗಳನ್ನು ಕಲಿಸಲು ಮತ್ತು ಸ್ವೀಕರಿಸಲು ಸಾಧ್ಯವಾಗದು ಎಂದು ಕಂಪನಿ ಹೇಳಿದೆ. 
ವೆಬ್ ಸೈಟ್ ಪ್ರವೇಶದ ಆಯ್ಕೆಯೂ ಇನ್ನು ಮುಂದೆ ಲಭ್ಯವಾಗಲಾರದು. ಈಗಾಗಲೇ ಕಳುಹಿಸಿದ ಮತ್ತು ಸ್ವೀಕರಿಸಿದ ಈ ಮೇಲ್ ಗಳು ಹಾಗೆಯೆ ಇರಲಿವೆ ಎಂದು ಕಂಪನಿ ಹೇಳಿದೆ.  


ಜಾಹೀರಾತು
https://www.timesofkarkala.in/2020/10/blog-post_8.html


Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget