ವಿಜಯಪುರ,ಅ.26: ಪೋಷಕರ ಕಣ್ಣೆದುರೇ ಯುವತಿಯೋರ್ವಳು ಭೀಮಾ ನದಿಗೆ ಹಾರಿ ಪ್ರಾಣ ಬಿಟ್ಟಿದ್ದಾಳೆ. ಆತ್ಮಹತ್ಯೆ ಮಾಡಿಕೊಂಡ ಯುವತಿಯ ಹೆಸರು ಐಶ್ವರ್ಯ ಶ್ರೀಪಾಲ ಕಬ್ಬಿನ(20).
ಈಕೆ ದಾರವಾಢದ ನಲಗುಂದದ ನಿವಾಸಿಯಾಗಿದ್ದು, ಪೋಷಕರ ಜತೆ ದೇವಸ್ಥಾನಕ್ಕೆ ತೆರಳುತ್ತಿದ್ದಳು. ಬಿಜಾಪುರದ ಆಲಮೇಲ ಹಾಗೂ ಕಲಬುರ್ಗಿಯ ಅಫಜಲಪುರ ತಾಲೂಕುಗಳ ನಡುವೆ ಭೀಮಾ ನದಿಗೆ ಅಡ್ಡಲಾಗಿ ಕಟ್ಟಿದ್ದ ಸೇತುವೆಯ ಬಳಿ ಬರುತ್ತಿದ್ದಂತೆಯೇ ವಾಹನವನ್ನು ನಿಲ್ಲಿಸಲು ಹೇಳಿದ್ದಾಳೆ. ತಾನು ನದಿಗೆ ನಾಣ್ಯ ಹಾಕಿ ಬರಬೇಕು ಎಂದು ಹೇಳಿದವಳು ಸೇತುವೆ ಬಳಿ ಹೋಗಿ ನದಿಗೆ ಹಾರಿದ್ದಾಳೆ.
ಇದನ್ನು ಕಣ್ಣಾರೆ ಕಂಡ ಪೋಷಕರು ಅಸಹಾಯಕರಾಗಿ ಆಘಾತಕ್ಕೊಳಗಾಗಿದ್ದಾರೆ. ಯುವತಿ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವೇನು ಎಂಬುದು ಈವರೆಗೆ ತಿಳಿದುಬಂದಿಲ್ಲ.
Post a comment