ರಾಜ್ಯ ಮತ್ತು ಜಿಲ್ಲಾ ಪ್ರಶಸ್ತಿ ಪುರಸ್ಕೃತ ಸಂಸ್ಥೆ ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರಿ ಫ್ರೆಂಡ್ಸ್ ಕ್ಲಬ್, ಲಿಯೋ ಕ್ಲಬ್ ಅಬ್ಬನಡ್ಕ ಮತ್ತು ಬೆನಕ ಟ್ರೇಡರ್ಸ್ ಇದರ ಸಹಯೋಗದಲ್ಲಿ "ಬೆಳಕು" ವಿಶೇಷ ಕಾರ್ಯಕ್ರಮದ ಮೂಲಕ ದೀಪಾವಳಿ ಅಂಗವಾಗಿ ಆರ್ಥಿಕವಾಗಿ ಹಿಂದುಳಿದ ಮತ್ತು ಕುಟುಂಬದ ನೋಟ ನಂದಳಿಕೆ ಕಮಲ ಮೂಲ್ಯ, ಬೋಳ ಇಂದಿರಾ ಶೆಟ್ಟಿ, ಬೋಳ ಕೊರಗ ಮೂಲ್ಯ ಬೋಳ ಮಂಗ್ರ, ನಂದಳಿಕೆ ಬಾಬು ಹರಿಜನ, ಸುಂದರಿ ಹರಿಜನ, ಬೋಳ ಭೋಜ ಮೂಲ್ಯ ಬೋಳ, ಮುತ್ತು ಪೂಜಾರಿ, ಸುಂಕುಮಾರು ವರಲಾ ಮನೋಹರ, ಗೋಳಿಕಟ್ಟೆ ವಸಂತ್ ರವರ ಕುಟುಂಬಗಳಿಗೆ ತಲಾ ಎರಡರಂತೆ ಎಲ್ ಇಡಿ ಬಲ್ಬ್ ವಿತರಿಸುವ ಮೂಲಕ ವಿಶಿಷ್ಟ ರೀತಿಯಲ್ಲಿ ದೀಪಾವಳಿ ಸಂಭ್ರಮಾಚರಣೆ ನಡೆಸಲಾಯಿತು.
ಈ ಸಂದರ್ಭದಲ್ಲಿ ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರಿ ಫ್ರೆಂಡ್ಸ್ ಕ್ಲಬ್ ನ ಸಂಚಾಲಕರಾದ ಅಬ್ಬನಡ್ಕ ಸಂದೀಪ್ ವಿ. ಪೂಜಾರಿ ಮಾತನಾಡಿ ಕತ್ತಲೆಯನ್ನು ಹೋಗಲಾಡಿಸಿ ಮನೆ ಹಾಗೂ ಮನದ ಕತ್ತಲೆಯನ್ನು ನಿವಾರಿಸಿ ಬೆಳಕು ಉಂಟುಮಾಡುವ ಸುಜ್ಞಾನದ ಪ್ರತೀಕ ಬೆಳಕಿನ ಹಬ್ಬವೇ ದೀಪಾವಳಿ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಅಬ್ಬನಡ್ಕ ಲಿಯೋ ಕ್ಲಬ್ಬಿನ ಅಧ್ಯಕ್ಷ ಪ್ರಶಾಂತ್ ಪೂಜಾರಿ, ಪೂರ್ವಾಧ್ಯಕ್ಷರಾದ ರಘುವೀರ್ ಶೆಟ್ಟಿ, ಆನಂದ ಪೂಜಾರಿ, ಸುರೇಶ್ ಪೂಜಾರಿ ಕಾಸ್ರಬೈಲು, ಸತೀಶ್ ಪೂಜಾರಿ ಅಬ್ಬನಡ್ಕ, ಕಾರ್ಯದರ್ಶಿ ಹರಿಪ್ರಸಾದ್ ಆಚಾರ್ಯ, ಜತೆ ಕಾರ್ಯದರ್ಶಿ ಹರಿಣಾಕ್ಷಿ ಪೂಜಾರಿ, ಕೋಶಾಧಿಕಾರಿ ವೀಣಾ ಪೂಜಾರಿ, ಮಹಿಳಾ ಸಂಘಟನಾ ಕಾರ್ಯದರ್ಶಿ ಪುಷ್ಪಾ ಕುಲಾಲ್ ಹಾಗೂ ಇನ್ನಿತರ ಸದಸ್ಯರು ಉಪಸ್ಥಿತರಿದ್ದರು.
ಜಾಹೀರಾತು
Post a comment