ಮಾಳ:ಎರಡು ಕಾರುಗಳ ನಡುವೆ ಡಿಕ್ಕಿ-Times of karkala

ನ.02:ಎರಡು ಕಾರುಗಳ ನಡುವೆ ಡಿಕ್ಕಿ ಸಂಭವಿಸಿದ್ದು ಎರಡೂ ಕಾರಿನ ಬಲಬಾಗ ಜಖಂ ಗೊಂಡ ಘಟನೆ ಮಾಳದಲ್ಲಿ ನಿನ್ನೆ ನಡೆದಿದೆ. 


ಚಿಕ್ಕಮಗಳೂರಿನ ಮೃಜೇಶ್ ಶೆಟ್ಟಿ ಎಂಬುವವರು ತನ್ನ ಕಾರಿನಲ್ಲಿ ಸಾಣೂರಿಂದ ಶೃಂಗೇರಿಗೆ ಹೊರಡುವಾಗ ತೆರಳುವಾಗ ಮಾಳ ಗ್ರಾಮದ ಓಟಿಹಳ್ಳ ತಿರುವಿನಲ್ಲಿ   KA-09-ME-7221 ನೇ ನಂಬ್ರದ ಕಾರು ವೇಗವಾಗಿ ಬಂದು ಇವರ ಕಾರಿಗೆ ಡಿಕ್ಕಿ ಹೊಡೆದಿದೆ.

ಈ ಕುರಿತು ಮೃಜೇಶ್ ಶೆಟ್ಟಿ ಕೆ ಆರ್ ರವರು ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಪೊಲೀಸ್ ವರದಿ:

ಕಾರ್ಕಳ: ದಿನಾಂಕ 01/11/2020 ರಂದು ಬೆಳಿಗ್ಗೆ 10:45 ಗಂಟೆಗೆ ಪಿರ್ಯಾದಿದಾರರಾದ ಮೃಜೇಶ್ ಶೆಟ್ಟಿ ಕೆ ಆರ್ (34), ತಂದೆ:  ಕೆ ರವಿ ಶೆಟ್ಟಿ, ವಾಸ: ರವಿ ಕಾಂಪ್ಲೆಕ್ಸ್ ಜಯಪುರ ಅಂಚೆ ಮತ್ತು ಗ್ರಾಮ ಕೊಪ್ಪ ತಾಲೂಕು ಚಿಕ್ಕ ಮಗಳೂರು ಜಿಲ್ಲೆ ಇವರು ಕಾರ್ಕಳ ತಾಲೂಕು ಸಾಣೂರು ಗ್ರಾಮದ  ತನ್ನ ಹೆಂಡತಿ ಮನೆಯಿಂದ ಶೃಂಗೇರಿಗೆ ಹೋಗಲು ತನ್ನ KA-54-M-2520 ನೇ ಕಾರನ್ನು ಚಲಾಯಿಸಿಕೊಂಡು ಬಜಗೋಳಿ-ಶೃಂಗೇರಿ ರಾಷ್ಟೀಯ ಹೆದ್ದಾರಿಯಲ್ಲಿ ಹೋಗುತ್ತಿದ್ದಾಗ ಕಾರ್ಕಳ ತಾಲೂಕು ಮಾಳ ಗ್ರಾಮದ ಓಟಿಹಳ್ಳ ತಿರುವಿನಲ್ಲಿ KA-09-ME-7221 ನೇ ನಂಬ್ರದ ಕಾರು ಚಾಲಕನು ತನ್ನ ಕಾರನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ರಸ್ತೆಯ ತೀರಾಬಲಭಾಗಕ್ಕೆ ಚಲಾಯಿಸಿಕೊಂಡು ಬಂದು ಎದುರಿನಿಂದ ಪಿರ್ಯಾದಿದಾರರ ಕಾರಿಗೆ ತಾಗಿಸಿದ ಪರಿಣಾಮ ಎರಡು ಕಾರಿನ ಬಲಭಾಗ ಜಖಂಗೊಂಡಿರುತ್ತದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 82/2020 ಕಲಂ: 279 ಐಪಿಸಿಯಂತೆ ಪಕರಣ ದಾಖಲಾಗಿರುತ್ತದೆ. https://www.timesofkarkala.in/2020/10/blog-post_8.html

Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget