ಬೈಲೂರು: ದಿನಾಂಕ 25 11 2020 ರಂದು ಇಲ್ಲಿನ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮಂಗಳೂರಿನ ಎಂ.ಆರ್.ಪಿ.ಎಲ್. ನ ಸಿ.ಎಸ್. ಆರ್ ನಿಧಿಯ ಅನುದಾನದಿಂದ ನಿರ್ಮಾಣಗೊಂಡ ನೂತನ ವಾಚನಾಲಯವನ್ನು ಶಾಸಕರಾದ ಶ್ರೀ ಸುನಿಲ್ ಕುಮಾರ್ ವಿ, ಅವರು ಉದ್ಘಾಟಿಸಿದರು. ಸಂಸ್ಥೆಯ ಹಿತೈಷಿ ಶ್ರೀ ದಿನೇಶ್ಚಂದ್ರ ಹೆಗ್ಗಡೆಯವರು ಜ್ಯೋತಿ ಬೆಳಗಿಸಿ ಶುಭಹಾರೈಸಿದರು.
ಶ್ರೀ ನಾಗರಾಜರಾವ್ ಚೀಫ್ ಮ್ಯಾನೇಜರ್ ಸಿ.ಎಸ್.ಆರ್. ವಿಭಾಗ ಎಂ.ಆರ್.ಪಿ.ಎಲ್., ರವರು ಹೊಸ ಕಟ್ಟಡದ ನಾಮಫಲಕವನ್ನು ಅನಾವರಣಗೊಳಿಸಿದರು. ಕಾಲೇಜು ಹಾಗೂ ಶಾಲಾ ಅಭಿವೃದ್ಧಿ ಮಂಡಳಿಗಳ ಅಧ್ಯಕ್ಷರು, ಸರ್ವ ಸದಸ್ಯರು, ಸ್ಥಳೀಯ ಜನಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಪ್ರಾಂಶುಪಾಲರಾದ ಶ್ರೀಮತಿ ಲೀಲಾಬಾಯಿ ಭಟ್ ಸ್ವಾಗತಿಸಿದರೆ ಶ್ರೀ ನಾಗರಾಜ್ ಉಪ ಪ್ರಾಂಶುಪಾಲರು ವಂದನಾರ್ಪಣೆಗೈದರು. ಉಪನ್ಯಾಸಕರಾದ ಶ್ರೀ ಶಾಂತಿನಾಥ ಜೋಗಿಯವರು ಕಾರ್ಯಕ್ರಮ ನಿರೂಪಿಸಿದರು.
ಜಾಹೀರಾತು
Post a comment