ವಿಶ್ವ ಹಿಂದೂ ಪರಿಷದ್ ಬಜರಂಗದಳ ಬೆಲ್ಮಣ್ಣು ವಲಯದ ಕಾರ್ಯಕರ್ತರು ಜುಲೈ ತಿಂಗಳಲ್ಲಿ ಹಡೀಲು ಬಿದ್ದ ಭೂಮಿಯನ್ನು ಹಸನು ಮಾಡಿ ಅದರಿಂದ ಬಂದ ಬೈ ಹುಲ್ಲನ್ನು ಒಟ್ಟು ಮಾಡಿ ಜೊತೆಗೆ ಬ್ರೈಟ್ ಗ್ರೂಪ್ ಫ್ರೆಂಡ್ಸ್ (ರಿ)ಸೂಡ ಇವರೂ ಕೂಡ ಒಟ್ಟು ಮಾಡಿದಂತ ಬೈ ಹುಲ್ಲನ್ನು ಎರ್ಲಪಾಡಿ ಗೋ ಶಾಲೆಗೆ ನೀಡಿದರು.
ಕಾರ್ಕಳ ಬಿಜೆಪಿ ಪ್ರಮುಖರಾದ ಸೂರ್ಯಕಾಂತ ಶೆಟ್ಟಿ ಹಾಗೂ ಶಂಕರ್ ಕುಂದರ್ ಇವರು ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಕಾರ್ಯದಲ್ಲಿ ಕಾರ್ಕಳ ಪ್ರಖಂಡ ಬಜರಂಗದಳ ಸಂಚಾಲಕರಾದ ಚೇತನ್ ಪೇರಲ್ಕೆ,ಸಹಸಂಚಾಲಕ ಸುನಿಲ್ ನಿಟ್ಟೆ,ಪ್ರಖಂಡ ಗೋ ರಕ್ಷಾ ಪ್ರಮುಖ್ ಪ್ರಸಾದ್ ನಿಟ್ಟೆ, ಬ್ರೈಟ್ ಗ್ರೂಪ್ ಅಧ್ಯಕ್ಷರಾದ ಪ್ರದೀಪ್ ದೇವಾಡಿಗ ಕಾರ್ಯದರ್ಶಿಯಾದ ಅನೀಶ್ ಆಚಾರ್ಯ, ಸೂಡ, ಪ್ರಮುಖರಾದ ಅರುಣ್ ಸೂಡ,ಉಡುಪಿ ಜಿಲ್ಲಾ ಅಲ್ಪ ಸಂಖ್ಯಾತ ಉಪಾಧ್ಯಕ್ಷ ಜೆರ್ರಿ ಲೋಬೊ, ಬೆಲ್ಮಣ್ಣು ವಲಯ ಅಧ್ಯಕ್ಷ ಪ್ರಭಾಕರ ಶೆಟ್ಟಿ, ಬೆಲ್ಮಣ್ಣು ವಲಯ ಕಾರ್ಯದರ್ಶಿ ಸುಧೀರ್ ರಾವ್, ವಲಯ ಬಜರಂಗದಳ ಸಂಚಾಲಕರಾದ ಹರೀಶ್ ಶೆಟ್ಟಿ, ವಲಯ ಗೋರಕ್ಷಾ ಪ್ರಮುಖ್ ಸ್ನೇಹಿತ್ ಶೆಟ್ಟಿ, ಸಹ ಸಂಚಾಲಕರಾದ ನರಸಿಂಹ ಶೆಣೈ, ಸಾಪ್ತಾಹಿಕ ಮಿಲನ್ ಪ್ರಮುಖ್ ನಾಗರಾಜ್ ಹಾಗೂ ಘಟಕದ ಕಾರ್ಯಕರ್ತರು ಉಪಸ್ಥಿತರಿದ್ದರು.
ಜಾಹೀರಾತು
Post a comment