►►ರೋಟರಿ ಆನ್ಸ್ ಕ್ಲಬ್ ಹಾಗೂ ರೋಟರಾಕ್ಟ್ ಕ್ಲಬ್ ವತಿಯಿಂದ ವಿಜೇತ ವಿಶೇಷ ಶಾಲೆಯಲ್ಲಿ ದೀಪಾವಳಿ ಆಚರಣೆ,
►►ವಿಶೇಷ ಮಕ್ಕಳು ತಯಾರಿಸಿದ ಗೂಡು ದೀಪ ಅನಾವರಣ,
►►ಕೊರಗಜ್ಜ ಹಾಡಿನ ಮಾಸ್ಟರ್ ಕಾರ್ತಿಕ್ ಗೆ ಗೌರವ.
ರೋಟರಿ ಆನ್ಸ್ ಕ್ಲಬ್ ಮತ್ತು ರೋಟರಾಕ್ಟ್ ಕ್ಲಬ್ ಕಾರ್ಕಳ ಹಾಗೂ ವಿಜೇತ ವಿಶೇಷ ಶಾಲೆ ಇದರ ಜಂಟಿ ಆಶ್ರಯದಲ್ಲಿ ವಿಶೇಷ ಮಕ್ಕಳ ಜೊತೆ ದೀಪಾವಳಿ ಹಬ್ಬ ಹಾಗೂ ಮಕ್ಕಳ ದಿನಾಚರಣೆಯನ್ನು ಆಚರಿಸಲಾಯಿತು.
ವಿಜೇತ ವಿಶೇಷ ಶಾಲಾ ಮಕ್ಕಳು ತಯಾರಿಸಿದ ದೀಪಾವಳಿ ಗೂಡುದೀಪ ವನ್ನು ಪ್ರಖ್ಯಾತ ಸಂಗೀತ ನಿರ್ದೇಶಕ ಜೀ ಕನ್ನಡ ವಾಹಿನಿಯ ಜತೆ ಜತೆಯಲ್ಲಿ ಧಾರಾವಾಹಿ ಪ್ರಖ್ಯಾತಿಯ ಸಂಗೀತ ನಿರ್ದೇಶಕ ಸುನಾದ್ ಗೌತಮ್ ಇವರು ಲೋಕಾರ್ಪಣೆಗೊಳಿಸಿದರು.
ಕೊರಗಜ್ಜ ಹಾಡಿನ ಪ್ರಖ್ಯಾತಿಯ ಮಾಸ್ಟರ್ ಕಾರ್ತಿಕ್ ಹಾಗೂ ಕಾರ್ತಿಕ್ ನ ಪ್ರತಿಭೆಗೆ ಪ್ರೋತ್ಸಾಹ ನೀಡಿದ ಅಕ್ಕ ರಕ್ಷಿತಾ ಅವರನ್ನು ಗೌರವಿಸಲಾಯಿತು.
ಮುಖ್ಯ ಅತಿಥಿಗಳಾಗಿ ರೋಟರಿ ಆನ್ಸ್ ಕ್ಲಬ್ ಅಧ್ಯಕ್ಷೆ ರೋ. ರಮಿತಾ ಶೈಲೇಂದ್ರ, ರೋ ಸತೀಶ್, ದುರ್ಗಾ ವಿದ್ಯಾ ಸಂಘ ದ ಸಂಚಾಲಕ ರಾಧಾಕೃಷ್ಣ ಶೆಟ್ಟಿ, ರೋಟರಾಕ್ಟ್ ಕ್ಲಬ್ ನ ಕಾರ್ಯದರ್ಶಿ ರೋ ಸಮೀರ್ ಹೆಗ್ಡೆ, ಟ್ರಸ್ಟಿ ಸಿಯಾ ಸಂತೋಷ್ ನಾಯಕ್, ಕಿರಣ್ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ರಾಜೇಂದ್ರ ಭಟ್ ಅವರು ಕಾರ್ಯಕ್ರಮ ನಿರೂಪಿಸಿ ಮಕ್ಕಳಿಗೆ ಆಟೋಟ ಸ್ಪರ್ಧೆ ಹಾಗೂ ಮನೋರಂಜನಾ ಕಾರ್ಯಕ್ರಮಗಳನ್ನು ನೆರವೇರಿಸಿ ಕೊಟ್ಟರು. ಕ್ಲಬ್ ವತಿಯಿಂದ ಎಲ್ಲ ಮಕ್ಕಳಿಗೆ ಬಹುಮಾನಗಳನ್ನು ವಿತರಿಸಿ ಉಪಹಾರದ ವ್ಯವಸ್ಥೆಯನ್ನು ಮಾಡಿದರು. ಶಾಲಾ ಮಕ್ಕಳು, ಸಿಬ್ಬಂದಿ ವರ್ಗ ಹಾಗೂ ಆಡಳಿತ ಮಂಡಳಿ ಪದಾಧಿಕಾರಿಗಳು, ಆನ್ಸ್ ಕಾರ್ಯದರ್ಶಿ ಸುಮಾ ನಾಯಕ್, ಮೀನಾಕ್ಷಿ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
Post a comment