"ದಿ. ಜಯ ಸುವರ್ಣ ಕೇವಲ ಒಬ್ಬ ವ್ಯಕ್ತಿಯಾಗಿದ್ದಿರಲಿಲ್ಲ.ಅವರೊಬ್ಬ ಶಕ್ತಿಯಾಗಿದ್ದರು.ಆ ಶಕ್ತಿ ಬಿಲ್ಲವ ಜನಾಂಗದ ಸಮಗ್ರ ಅಭಿವೃದ್ಧಿಯನ್ನು ಮಾಡುವಲ್ಲಿ ಯಶಸ್ವಿಯಾಗಿತ್ತು"-ಕಾರ್ಕಳ ಬಿಲ್ಲವ ಸಂಘದ ಅಧ್ಯಕ್ಷ ಡಿ ಆರ್ ರಾಜು-Times of karkala

"ದಿ. ಜಯ ಸುವರ್ಣ ಕೇವಲ ಒಬ್ಬ ವ್ಯಕ್ತಿಯಾಗಿದ್ದಿರಲಿಲ್ಲ.ಅವರೊಬ್ಬ ಶಕ್ತಿಯಾಗಿದ್ದರು. ಅವರ ಆ ಶಕ್ತಿ ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವ ಸಿದ್ಧಾಂತದಡಿಯಲ್ಲಿ ಸಾಮಾಜಿಕ ತುಳಿತಕ್ಕೆ ಒಳಗಾಗಿದ್ದ ಬಿಲ್ಲವ ಜನಾಂಗದ ಸಮಗ್ರ ಅಭಿವೃದ್ಧಿಯನ್ನು ಮಾಡುವಲ್ಲಿ ಯಶಸ್ವಿಯಾಗಿತ್ತು. ಅವರ ನಿಧನದಿಂದ ಸಮಾಜ ಬಡವಾಗಿದೆ ಎಂದು ಕಾರ್ಕಳ ಬಿಲ್ಲವ ಸಂಘದ ಅಧ್ಯಕ್ಷ  ಡಿ ಆರ್ ರಾಜು ಹೇಳಿದರು .


ಅ‌ವರು  ನಾರಾಯಣ ಗುರು ಸಭಾ ಭವನದಲ್ಲಿ ಬಿಲ್ಲವ ಮಹಾ ಮಂಡಲದ ಗೌರವಾಧ್ಯಕ್ಷ, ಭಾರತ ಬ್ಯಾಂಕ್ ನ ಸಂಸ್ಥಾಪಕ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ,  ಜಯ  ಸಿ.ಸುವರ್ಣರವರ ನಿಧನದ ಪ್ರಯುಕ್ತ ಆಯೋಜಿಸಲಾಗಿದ್ದ  ಶೃದ್ಧಾಂಜಲಿ ಕಾರ್ಯಕ್ರಮದಲ್ಲಿ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.

ವಿಶ್ರಾಂತ ಪತ್ರಕರ್ತ, ಚಿಂತಕ ಬಿಪಿನಚಂದ್ರ ಪಾಲ್ ನಕ್ರೆ ಮಾತಾಡಿ ದಿ. ಜಯ ಸುವರ್ಣ ಒಂದು ಜನಾಂಗದ ನಾಯಕನಾಗಿರದೆ ಸರ್ವಜನಾಂಗದ ನಾಯಕನಾಗಿದ್ದು ,ವಿದ್ಯೆ ಮತ್ತು ಉದ್ಯೋಗದಿಂದ ಮಾತ್ರ‌ ಒಂದು ಸಮಾಜ ಅಭಿವೃದ್ದಿಯನ್ನು ಹೊಂದಲು ಸಾಧ್ಯ ಎಂದು ಬಲವಾಗಿ ನಂಬಿದ್ದರು ಎಂದು ಹೇಳಿದರು.


ಜನಾಂಗದ ಯುವ ನಾಯಕ, ಸುಶಾಂತ್  ಸುಧಾಕರ್ ಮಾತಾಡಿ ದಿ. ಜಯ ಸುವರ್ಣ ರವರು ಕರ್ನಾಟಕ ರಾಜ್ಯೋತ್ಸವ ಪ್ರಶಸ್ಥಿ ಪಡೆದ ದಿನದಂದೇ ಅವರ ಪುಣ್ಯ ಸ್ಮರಣೆ ಮಾಡುವಂತ‌ ಪರಿಸ್ಥಿತಿ ಒದಗಿ ಬಂದಿರುವುದು ಒಂದು ಯೋಗಾಯೋಗ. ಬದುಕಿನಲ್ಲಿ ಅವರು ಅಳವಡಿಸಿಕೊಂಡ ಆದರ್ಶದ ದಾರಿಯಲ್ಲಿ ನಾವೂ ನಡೆದು ಅವರ ಋಣ ತೀರಿಸೋಣ ಎಂದರು.


 ಮಾಜಿ ಅಧ್ಯಕ್ಷ ಕೆ.ಗೋಪಾಲ, ಯುವ ವಿಭಾಗದ ಅಧ್ಯಕ್ಷ ಸಂದೇಶ್ ಕೋಟ್ಯಾನ್,  ಪ್ರದೀಪ ಎನ್. ಆರ್., ಸಂತೋಷ ಬಂಗೇರಾ, ವಿಠಲ ಪೂಜಾರಿ, ಶ್ರೀಮತಿ ವಿಶಾಲಾಕ್ಷಿ, ಜಯಂತಿ ಬಂಗೇರಾ, ಶಾಂತ ಕಲ್ಯಾ, ಸುರೇಂದ್ರ ಮೈಪಾಲ್, ಲಕ್ಷ್ಮಣ ಕಾರ್ಕಳ ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.

ಕಾರ್ಯದರ್ಶಿ ಪ್ರಭಾಕರ ಬಂಗೇರ ದಿ. ಜಯ ಸಿ. ಸುವರ್ಣ ರವರ ಸಮಗ್ರ ಸಾಧನೆಯ ವಿವರವನ್ನು ಸಭೆಗೆ ನೀಡಿ ನುಡಿನಮನ ಸಲ್ಲಿಸಿ,  ಸ್ವಾಗತಿಸಿದರು. ಪ್ರವೀಣ ಸುವರ್ಣ ಪ್ರಸ್ಥಾವನೆ ಗೈದರು. ಶ್ರೀಮತಿ ಸುಜಯ ವಂದನಾರ್ಪಣೆ ಗೈದರು.https://www.timesofkarkala.in/2020/10/blog-post_8.html

Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget