ಬ್ರಹ್ಮಾವರದಲ್ಲಿ ಎರಡು ತಂಡಗಳ ಹೊಡೆದಾಟ:ಮೂರು ಬೈಕ್ ಭಸ್ಮ -Times Of Karkala

 ಬ್ರಹ್ಮಾವರ,ನ.1:ಕೊಳಲಗಿರಿ ಸರಕಾರಿ ಶಾಲೆಯ ಬಳಿ ಶನಿವಾರ ತಡ ರಾತ್ರಿ ಎರಡು ತಂಡಗಳ ನಡುವೆ ಹೊಡೆದಾಟ ನಡೆದಿದ್ದು, ಮೂರು ಬೈಕ್ ಗಳನ್ನು ಸುಟ್ಟು ಹಾಕಿ ತಂಡವೊಂದು ಪರಾರಿಯಾಗಿದೆ. 

ಎರಡು ತಂಡ ನಿನ್ನೆ ರಾತ್ರಿ ಬಾರ್ ಒಂದರಲ್ಲಿ ಕುಡಿದು ಗಲಾಟೆ ಮಾಡಿ ನಂತರ ತಮ್ಮ ಊರಿಗೆ ಹೋಗುವ ಸಂದರ್ಭ ಈ ತಲವಾರು ಕಾಳಗ ನಡೆದಿದೆ ಎನ್ನಲಾಗಿದೆ. ಕೊಳಲಾಗಿರಿಯ ಆಲ್ವಿನ್ ಹಾಗೂ ನಾಗರಾಜ್ ಶನಿವಾರ ರಾತ್ರಿ ಅಮುಂಜೆ ಬಾರ್ ನಲ್ಲಿ ಯಾವುದೊ ವಿಚಾರಕ್ಕೆ ಇಬ್ಬರ ನಡುವೆ ಜಗಳ ಉಂಟಾಗಿತ್ತು. ನಂತರ ಇಬ್ಬರು ತಮ್ಮ ತಂಡದೊಂದಿಗೆ ರಾತ್ರಿ 12 ವೇಳೆ ಸರಕಾರಿ ಶಾಲೆ ಬಳಿ ಜಮಾಯಿಸಿದ್ದರು ಎಂದು ತಿಳಿದು ಬಂದಿದೆ. 

ಆಲ್ವಿನ್ ಸ್ಥಳೀಯ ಯುವಕರಾದ ಬಾಲಕೃಷ್ಣ, ವಿಶಾಲ್, ಸೂರಜ್ ಮತ್ತು ಮೂವರ ಜತೆಗಿದ್ದು, ಇನ್ನೊಂದು ತಂಡದಲ್ಲಿ ಕೊಳಲಗಿರಿ ನಾಗರಾಜ್ ತನ್ನ ಏಳು ಜನ ಯುವಕರೊಂದಿಗೆ ಬಂದು ಹೊಡೆದಾಟ ಆರಂಭಿಸಿದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ. 


 



https://www.timesofkarkala.in/2020/10/blog-post_8.html





Labels:

Post a comment

MKRdezign

Contact form

Name

Email *

Message *

Powered by Blogger.
Javascript DisablePlease Enable Javascript To See All Widget