ಬಜಗೋಳಿ:ಬಸ್-ಕಾರು ಡಿಕ್ಕಿ-Times of karkala

ಬಸ್ ಮತ್ತು ಕಾರಿನ ನಡುವೆ ಡಿಕ್ಕಿ ಸಂಭವಿಸಿ ಕಾರು ಚಾಲಕ ಗಾಯಗೊಂಡ ಘಟನೆ ದಿನಾಂಕ 12/11/2020 ರಂದು ಮಧ್ಯಾಹ್ನ 03:00 ಗಂಟೆಗೆ ಮುಡಾರು ಬಳಿ ನಡೆದಿದೆ.

ಕುದೂರೆಮುಖ ರಾಷ್ಟ್ರೀಯ ಹೆದ್ದಾರಿ ಶೃಂಗೇರಿಗೆ ತೆರಳುತ್ತಿದ್ದ ಕಾರ್ ಗೆ ಮುಡಾರು ಬಳಿ ಮಾಳ ಕಡೆಯಿಂದ ಕಾರ್ಕಳ ಕಡೆಗೆ ಬರುತ್ತಿದ್ದ ಬಸ್ ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ಕಾರ್ ಚಾಲಕ ಚಂದ್ರಶೇಖರ ಐತಾಳ್,ಸಹಸವಾರರಾದ ಶಿಲ್ಪಾ, ಮಂಜುನಾಥ್ ಗಂಭೀರ ಗಾಯಗೊಂಡಿದ್ದಾರೆ.


ಈ ಕುರಿತು ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪೊಲೀಸ್ ವರದಿ:

ಕಾರ್ಕಳ: ದಿನಾಂಕ 12/11/2020 ರಂದು ಮಧ್ಯಾಹ್ನ 15:00 ಗಂಟೆಗೆ ಪಿರ್ಯಾದಿದಾರರಾದ ಶ್ರೀಮತಿ ಶಿಲ್ಪಾ (34), ತಂದೆ:  ಚಂದ್ರಶೇಖರ ಐತಾಳ್, ವಾಸ: ವೈಷ್ಣವಿ ನಿಲಯ ಇಡ್ಯಾ ದೇವಸ್ಥಾನ ರಸ್ತೆ ಗುಡ್ಡೆಕೊಪ್ಪಲ , ಸುರತ್ಕಲ್ ಮಂಗಳೂರು ದ.ಕ ಜಿಲ್ಲೆ  ಇವರ ಗಂಡ ಚಂದ್ರಶೇಖರ ಐತಾಳ್ ಹಾಗೂ ಭಾವ ಮಂಜುನಾಥ್ ರಾವ್ ರವರೊಂದಿಗೆ ಶೃಂಗೇರಿಗೆ ಹೋಗಲು ಕಾರ್ಕಳ ಕುದುರೆಮುಖ ರಾಷ್ಟೀಯ ಹೆದ್ದಾರಿಯಲ್ಲಿ ಮಾರ್ಗವಾಗಿ KA-19-MH-3185 ನೇ ನಂಬ್ರದ  ಕಾರನ್ನು ಪಿರ್ಯಾದಿದಾರರ  ಗಂಡ ಚಲಾಯಿಸಿಕೊಂಡು ಕಾರ್ಕಳ ತಾಲೂಕು ಮುಡಾರು ಗ್ರಾಮದ ಪ್ರವೀಣ್ ಎಂಬುವವರ ಗ್ಯಾರೇಜ್ ಬಳಿ ಹೋಗುತ್ತಿದ್ದಾಗ ಮಾಳ ಕಡೆಯಿಂದ ಕಾರ್ಕಳ ಕಡೆಗೆ KA-20-A-9412 ನೇ  ನಂಬ್ರದ ಕುಷ್ಮಾಂಡಿನಿ ಟ್ರಾವೆಲ್ಸ್ ಎಂಬ ಬಸ್ ಚಾಲಕನು ತನ್ನ ಬಸ್ ನ್ನು  ಅತೀವೇಗ ಹಾಗೂ ಅಜಾಗರೂಕತೆಯಿಂದ ರಸ್ತೆಯ ಮಧ್ಯಭಾಗಕ್ಕೆ ಚಲಾಯಿಸಿಕೊಂಡು ಬಂದು ಎದುರಿನಿಂದ ಪಿರ್ಯಾದಿದಾರರ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಚಂದ್ರಶೇಖರ ಐತಾಳ್ ಹಣೆಗೆ ರಕ್ತಗಾಯ ಹಾಗೂ ಎಡಕಾಲಿನ ಮೂಳೆಮುರಿತವಾಗಿದ್ದು, ಮಂಜುನಾಥರವರ ಹಣೆ ಮುಖಕ್ಕೆ ರಕ್ತಗಾಯ ಹಾಗೂ ಪಿರ್ಯಾದಿದಾರರ ಎಡಕಾಲಿಗೆ ಗುದ್ದಿದ್ದ ನೋವಾಗಿರುತ್ತದೆ ಮತ್ತು ಎರಡು ವಾಹನದ ಮುಂಭಾಗ ಜಖಂಗೊಂಡಿರುತ್ತದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 87/2020 ಕಲಂ: 279, 337, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 

ಜಾಹೀರಾತು 

 


 



https://www.timesofkarkala.in/2020/10/blog-post_8.html






Labels:

Post a comment

MKRdezign

Contact form

Name

Email *

Message *

Powered by Blogger.
Javascript DisablePlease Enable Javascript To See All Widget