ಕಾರ್ಕಳ ದಾನಶಾಲೆಯ ಜೈನಮಠದ ಉಸ್ತುವಾರಿ, ಆರೆಸೆಸ್ ಮುಖಂಡ,ಈಶ್ವರಪ್ಪರವರ ಗುರು ದೇಜಪ್ಪ ಜೈನ್ ನಿಧನ-Times of karkala

ಕಾರ್ಕಳ ದಾನಶಾಲೆಯ ಜೈನಮಠದ ಉಸ್ತುವಾರಿ, ಆರೆಸೆಸ್ ಮುಖಂಡ,ಈಶ್ವರಪ್ಪರವರ ಗುರು ದೇಜಪ್ಪ ಜೈನ್ ನಿಧನ ಕಾರ್ಕಳ:ಕಾರ್ಕಳ ಜೈನ ಮಠದ ಮೇಲುಸ್ತುವಾರಿ, ಹಿರಿಯ ಆರೆಸೆಸ್ ಮುಖಂಡ,ಶಿವಮೊಗ್ಗ ಆರೆಸೆಸ್ ಮುಖಂಡರಾಗಿದ್ದು ಬಿಜೆಪಿಯ ಈಶ್ವರಪ್ಪರವರ ಗುರುವಾಗಿದ್ದ ದೇಜಪ್ಪ ಜೈನ್(87) ರವರು ದಿನಾಂಕ 17  ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ.


ದಾನಶಾಲೆ ನಿವಾಸಿಯಾಗಿರುವ ದೇಜಪ್ಪ ಜೈನ್ 25  ವರ್ಷಗಳ ಕಾಲ ಕಾರ್ಕಳ  ದಾನಶಾಲೆ ಜೈನಮಠದ ಮೇಲುಸ್ತುವಾರಿಯಾಗಿದ್ದರು. ಮಠದ ಅಭಿವೃದ್ಧಿಗೆ ತನ್ನ ಸ್ವಂತ ಖರ್ಚಿನಲ್ಲಿ ಸಾಕಷ್ಟು ಕೆಲಸ ಮಾಡಿದ್ದ ಇವರು ಜನಾನುರಾಗಿಯಾಗಿದ್ದರು.

ಶಿವಮೊಗ್ಗದಲ್ಲಿ 35 ವರ್ಷ  ಹಿಂದಿ ಪಂಡಿತರಾಗಿದ್ದ ಇವರು ಆರೆಸೆಸ್ ನಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಬಿಜೆಪಿಯ ಮುಖಂಡ ಈಶ್ವರಪ್ಪರವರ ಗುರುವಾಗಿದ್ದರು.

ಮೃತರು ಓರ್ವ ಪುತ್ರನನ್ನು ಅಗಲಿದ್ದಾರೆ.

ಜಾಹೀರಾತು 

 


 


https://www.timesofkarkala.in/2020/10/blog-post_8.html






Post a comment

MKRdezign

Contact form

Name

Email *

Message *

Powered by Blogger.
Javascript DisablePlease Enable Javascript To See All Widget