ಕಾರ್ಕಳ,ನ.3: ಕಾರ್ಕಳದ ಶ್ರೀ ವೆಂಕಟರಮಣ ಪದವಿ ಕಾಲೇಜಿನಲ್ಲಿ ಸುಮಾರು 37 ವರ್ಷಗಳ ಕಾಲ ಉಪನ್ಯಾಸಕಿಯಾಗಿ ಪ್ರಾಂಶುಪಾಲೆಯಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಮಿತ್ರಪ್ರಭ ಹೆಗ್ಡೆಯವರ ಅಭಿನಂದನಾ ಕಾರ್ಯಕ್ರಮವು ಭಾನುವಾರದಂದು (8/11/2020) ಸಂಜೆ 4 ಗಂಟೆಗೆ ಹೋಟೆಲ್ ಪ್ರಕಾಶ್ ನ ಸಂಭ್ರಮ ಸಭಾಭವನದಲ್ಲಿ ಜರುಗಲಿದೆ.
ಹಿರಿಯ ಸಾಹಿತಿ ಶ್ರೀ ಅಂಬಾತನಯ ಮುದ್ರಾಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಹಿರಿಯ ಪತ್ರಕರ್ತ ಮನೋಹರ ಪ್ರಸಾದ್, ಶ್ರೀ ಭುವನೇಂದ್ರ ಕಾಲೇಜಿನ ಪ್ರಾಂಶುಪಾಲರಾದ ಮಂಜುನಾಥ ಕೋಟ್ಯಾನ್, ಮುನಿಯಾಲು ಸರಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಬೇಬಿ ಡಿ ಆಳ್ವ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
Post a comment