ಹೆಬ್ರಿ - ಪ್ರಭು ಕಾಂಪ್ಲೆಕ್ಸ್ : ಸದಾ ಹೊಸ ಯೋಚನೆ ಯೋಜನೆಯ ಮೂಲಕ ಸಮಾಜಮುಖಿ ಸೇವೆಯಲ್ಲಿ ಸದ್ದಿಲ್ಲದೆ ನಿರತರಾಗುವ ಹೆಬ್ರಿ ಸಿಟಿ ಲಯನ್ಸ್ ಕ್ಲಬ್ ಸ್ಥಾಪಕ ಅಧ್ಯಕ್ಷರಾದ ಸಮಾಜಸೇವಕ ದಿನಕರ ಪ್ರಭು ಅವರು ಈ ವರ್ಷ ಸೋಮವಾರ ವಿಶೇಷವಾಗಿ ಧನಲಕ್ಷ್ಮಿ ಪೂಜೆ ಮಾಡಿ ಸುದ್ದಿಯಾಗಿದ್ದಾರೆ.
ಉಷಾ ಮೆಡಿಕಲ್ ನಲ್ಲಿ ದಿನಕರ ಪ್ರಭು ಅವರಿಗೆ ವ್ಯಾಪಾರ ಒಂದೇ ಉದ್ದೇಶವಲ್ಲ. ತನ್ನ ದುಡಿಮೆಯ ಸ್ವಲ್ಪ ಹಣವನ್ನು ಸಮಾಜಸೇವೆಗೆ ಮೀಸಲಿಡುವುದನ್ನು ಕಳೆದ ಹಲವು ವರ್ಷಗಳಿಂದ ಮಾಡುತ್ತ ಬಂದಿದ್ದಾರೆ. ದೇಶಕ್ಕೆ ಸೇವೆ ಸಲ್ಲಿಸುತ್ತಿರುವವರನ್ನು ಸ್ಮರಿಸುತ್ತಾರೆ. ಮೆಡಿಕಲ್ ನಲ್ಲಿ ಗೋಗ್ರಾಸ, ಅನಾಥ ಮತ್ತು ಸೈನಿಕರ ಕಲ್ಯಾಣಕ್ಕೆ ನಿಧಿ ಸ್ಥಾಪಿಸಿ ಪ್ರತಿತಿಂಗಳು ಅದನ್ನು ವಿನಿಯೋಗಿಸಿ ಸೇವೆ ಮಾಡುತ್ತಾರೆ.
ಈ ವರ್ಷದ ದೀಪಾವಳಿಯ ಧನಲಕ್ಷ್ಮಿ ಪೂಜೆಯನ್ನು ಸೋಮವಾರ ನಮ್ಮ ದೇಶ ಕಾಯುವ ಯೋಧರಿಗೆ ನಮಿಸುವ ( ಸೆಲ್ಯೂಟ್ ಟು ಸೋಲ್ಜರ್ ) ಮೂಲಕ ಆಚರಿಸಿದ್ದಾರೆ. ಅಯೋಧ್ಯೆಗೆ ನಮನ, ನಮೋ ಮೋದಿ, ವೈಧ್ಯರಿಗೆ, ಮಾಧ್ಯಮಮಿತ್ರರಿಗೆ,ಪೊಲೀಸರಿಗೆ, ಕೊರೊನಾ ವಾರಿಯರ್ಸ್ ಗೆ ನಮಿಸುವ ಮೂಲಕ ವಿಶಿಷ್ಟವಾಗಿ ಆಚರಿಸಿದ್ದಾರೆ. ನೂರಾರು ಗಣ್ಯರು ಬೇಟಿ ನೀಡಿ ಪೂಜೆಯಲ್ಲಿ ಪಾಲ್ಗೋಂಡಿದ್ದಾರೆ.
ದೀಪ್ತಿ ದಿನಕರ ಪ್ರಭು, ಸುಶ್ಯಾಮ್ ಪ್ರಭು, ನರ್ಮದಾ ಪ್ರಭು ಹಾಗೂ ಕುಟುಂಬದವರು ಸಾಥ್ ನೀಡಿದ್ದಾರೆ. ಲಯನ್ಸ್ ಕ್ಲಬ್ ಸಂಪುಟ ಕಾರ್ಯದರ್ಶಿ ಹೆಬ್ರಿ ಟಿ.ಜಿ.ಆಚಾರ್ಯ, ಸೀತಾನದಿ ಸೌಖ್ಯ ಯೋಗ ಟ್ರಸ್ಟ್ ಸಂಸ್ಥಾಪಕ ವಿಠ್ಠಲ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
Post a comment