ಹೆಬ್ರಿ:ಮದರಂಗಿಯಲ್ಲಿ ಭಜನಾ ಸಂಭ್ರಮ.ತುಂಡು ಗುಂಡಿನ ಪಾರ್ಟಿಗೆ ಕಡಿವಾಣ:ಹಳ್ಳಿಯಿಂದಲೇ ಸಂಕಲ್ಪ-ಟೈಮ್ಸ್ ಆಫ್ ಕಾರ್ಕಳ ವಿಶೇಷ ವರದಿ

ಹೆಬ್ರಿ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಹೆಬ್ರಿ ವಲಯದಲ್ಲಿ ಜನ ಜಾಗೃತಿ ವೇದಿಕೆ ಮತ್ತು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಇತರ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ನಡೆಸಿದ ಮದರಂಗಿಯಲ್ಲಿ ಮದ್ಯಪಾನ ನಿಷೇಧದ ಜಾಗೃತಿ  ಕಾರ್ಯಕ್ರಮದ ಬಳಿಕ ಹೆಬ್ರಿ ಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅನಂತ ಶ್ರೀ ಜ್ಞಾನ ವಿಕಾಸ ಕೇಂದ್ರದ ಸದಸ್ಯರಾದ ಸವಿತ ಅವರ ಮಗಳ ಮದುವೆಯ  ಮುಂಚಿನ  ಮದರಂಗಿಯಲ್ಲಿ ಅನಂತ ಶ್ರೀ ಮಹಿಳಾ ಜ್ಞಾನ ವಿಕಾಸ ಕೇಂದ್ರದ ಸದಸ್ಯರು ಕುಣಿತ ಭಜನೆ ಮಾಡುವುದರ ಮೂಲಕ ಮದುವೆಯ ಶುಭಾ ಕಾರ್ಯಕ್ಕೆ ಶುಭ ಚಾಲನೆ ನೀಡಿದರು.ಆ ಮೂಲಕ ಗುಡು ತುಂಡು ಪಾರ್ಟಿಗೆ ಕಡಿವಾಣ ಹಾಕಿದರು.

 

ನಾಡ್ಪಾಲಿನ ಶ್ರೀ ದುರ್ಗಾ ಸಂಘದ ಸದಸ್ಯೆ ಸುಮಲತಾ  ಇವರ ಮದುವೆಯ  ಮದರಂಗಿಯಲ್ಲಿ ಶಾರದಾಂಬ ಮಹಿಳಾ ಜ್ಞಾನ ವಿಕಾಸ ಕೇಂದ್ರದಸದಸ್ಯರು, ಬಚ್ಚಪು ಶಿವಶಕ್ತಿ ಸಂಘದ ಸದಸ್ಯ ರಮೇಶ್ ನಾಯ್ಕ ಅವರ ಮಗನ ಹುಟ್ಟುಹಬ್ಬದ ಸಂಭ್ರಮ ಗದ್ದುಗೆ ಶ್ರೀ ದುರ್ಗಾ ಪರಮೇಶ್ವರಿ ಅಮ್ಮನ ವರ ಭಜನಾ ಮಂಡಳಿಯ ಸದಸ್ಯರ ಕುಣಿತ ಭಜನೆ ಮಾಡಿದರು. ಬಚ್ಚಪು ಶ್ರೀ ನವದುರ್ಗಾ ಸಂಘದ ಸದಸ್ಯ ಶಶಿಧರ್ ನಾಯ್ಕ  ಮತ್ತು ಬಚ್ಚಪು ಶಿವಶಕ್ತಿ ಸಂಘದ ಸದಸ್ಯ ನಾಗರಾಜ್ ಅವರ ಮದುವೆ ಯಲ್ಲಿ ಗದ್ದುಗೆ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಭಜನಾ ಮಂಡಳಿಯ ಸದಸ್ಯ ಕುಣಿತ ಭಜನೆಯ ಮೂಲಕ ಸಂಭ್ರಮಿಸಿದರು. 

ಹೆಬ್ರಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ  ಉಪಪ್ರಾಂಶುಪಾಲ ದಿವಾಕರ ಮರಕಾಲ ಅವರ ಮದುವೆಯಲ್ಲಿ ಮದರಂಗಿಯಲ್ಲಿ ಹೆಬ್ರಿ ಗ್ರಾಮದ ವಿಘ್ನೇಶ್ವರ ಸಂಘದ ಸದಸ್ಯರು, ಶ್ರೀ ಅನಂತಶ್ರೀ ಭಜನಾ ಮಂಡಳಿ ಮತ್ತು ರಾಘವೇಂದ್ರ ಭಜನಾ ಮಂಡಳಿಯಿಂದ ಭಜನೆ ನಡೆಯಿತು. ಬೆಳಂಜೆ ಕಾರ್ಯಕ್ಷೇತ್ರದ ಏಕದಂತ ಸಂಘದ ಸದಸ್ಯ ಆನಂದ   ಗೃಹ ಪ್ರವೇಶದಲ್ಲಿ  ಮಲ್ಲಿಕಾರ್ಜುನ ಭಜನಾ ಮಂಡಳಿ ಮತ್ತು ಬ್ರಹ್ಮಶ್ರೀ ನವಜೀವನ ಭಜನಾ ಮಂಡಳಿ ಯಿಂದ ಭಜನಾ ಕಾರ್ಯಕ್ರಮ ನಡೆಯಿತು. ನಾಡ್ಪಾಲು ಗ್ರಾಮದ ದೇವಳಾರಬೆಟ್ಟು ಪ್ರಗತಿ ಬಂಧು ತಂಡದ ಸದಸ್ಯಪ್ರವೀಣ್  ಮಗನ ಹುಟ್ಟುಹಬ್ಬ ಆಚರಣೆಯನ್ನು ಶ್ರೀ ಲಕ್ಷ್ಮೀ ನಾರಾಯಣ ದೇವಸ್ಥಾನದಲ್ಲಿ  ಶ್ರೀ ಲಕ್ಷ್ಮೀ ನಾರಾಯಣ ಭಜನಾ ಮಂಡಳಿಯ ಭಜನಾ ಕಾರ್ಯಕ್ರಮದ ಮೂಲಕ ನಡೆಸಿದರು.


ಚಾರ ಗ್ರಾಮದ  ವಂಡಾರು ಬೆಟ್ಟು ಒಕ್ಕೂಟದ ಹೆರ್ಗಲ್ಲುಸಂಘದ ಸಂತೋಷ್ ರವರ ಮದರಂಗಿ ಕಾರ್ಯಕ್ರಮದಲ್ಲಿ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ ಕೊಂಜಾಡಿ ಮತ್ತು ಶ್ರೀ ರಾಮ ಭಜನಾ ಮಂಡಳಿ ಚಾರ ಇವರ ಭಜನಾ ಕಾರ್ಯಕ್ರಮ.   ಹೆಬ್ರಿ ಗ್ರಾಮದ ಹೆಬ್ರಿ ಬಿ ಒಕ್ಕೂಟದ ಶ್ರೀ ಗುರು ಸಂಘದ ಸದಸ್ಯ ಶ್ರೀಧರ್ ಮದುವೆಯ ಮದರಂಗಿಯಲ್ಲಿ ಶ್ರೀ ಗದ್ದುಗೆ ದುರ್ಗಾಪರಮೇಶ್ವರಿ ಅಮ್ಮನವರ ಭಜನಾ ಮಂಡಳಿ, ಶ್ರೀ ಅನಂತಲಕ್ಷ್ಮೀ ಭಜನಾ ಮಂಡಳಿ ಹೆಬ್ರಿ, ಶ್ರೀ ಅನಂತಪದ್ಮನಾಭ ಭಜನಾ ಮಂಡಳಿ ಬೀಡು ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ ನಡೆಯಿತು.


ಒಂದೊಂದೇ ಶುಭಾ ಕಾರ್ಯಕ್ರಮದಲ್ಲಿ ಇಂತಹಾ ಭಜನೆಯ ಸುಂದರ ಸಂಭ್ರಮದ ಕಾರ್ಯಕ್ರಮವನ್ನು ಇಟ್ಟಲ್ಲಿ ಅನೇಕ ಯುವಕರು ದುಶ್ಚಟಗಳಿಗೆ ಬಲಿಯಾಗದಂತೆ ಜಾಗೃತಿ ವಹಿಸಬಹುದು.   ಡಾ. ಡಿ ವೀರೇಂದ್ರ ಹೆಗ್ಗಡೆಯವರ ಮದ್ಯ ಮುಕ್ತ ಸಮಾಜ ನಿರ್ಮಾಣದ ಕಾರ್ಯದಲ್ಲಿ ನಾವೆಲ್ಲಾ ಕೈ ಜೋಡಿಸೋಣ. 

- ಪ್ರವೀಣ್‌ ಆಚಾರ್ಯ. ಮೇಲ್ವೀಚಾರಕರು ಹೆಬ್ರಿ ವಲಯ. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ. 

ಜಾಹೀರಾತು 

  Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget