ತುಲುನಾಡಲ್ಲಿ ಕಾರ್ಲ(ಕಾರ್ಕಳ) ಹೇಗೆ ಫೇಮಸ್ಸೋ ಹಾಗೆ ಕಾರ್ಲದಲ್ಲಿ "ಪರ್ಪಲೆ ಗುಡ್ಡೆ" ಫೇಮಸ್ಸೋ ಫೇಮಸ್. ಅಂದು ಈ ಗುಡ್ಡದಲ್ಲಿ ಎಲ್ಲೆಡೆ ನೋಡಿದರೂ ಅಸಂಖ್ಯಾತ ಪಾಲೆ ಮರಗಳ ಸಮೂಹವೇ ಇತ್ತು."ಪರ್ರೆ ಪಾಲೆದ ಪೇರ್"(ಕುಡಿಯಲು ಹಾಳೆ ಮರದ ಚೆಕ್ಕೆಯ ಕಷಾಯ)ತಯಾರಿಸಲು ಆಟಿ ಅಮವಾಸ್ಯೆ ದಿನ ಇಲ್ಲಿನ ಸುತ್ತಲಿನ ಜನರು ಇಲ್ಲಿಗೆ ಬಂದು ಚೆಕ್ಕೆ ಒಯ್ಯುತ್ತಿದ್ದರು.
"ಪರ್ರೆ ಪಾಲೆ" ಶಬ್ಧದಿಂದಲೇ "ಪರ್ಪಲೆ" ಎಂಬ ಹೆಸರು ಈ ಗುಡ್ಡಕ್ಕೆ ಬಂದಿದೆ.ಇದು ಕಾಡು ಅಲ್ಲ.ಗುಡ್ಡ ಆಗಿತ್ತು. ಎಲ್ಲಾ ಔಷಧೀಯ ಗಿಡಮರಗಳು ಇಲ್ಲಿದ್ದವು.ಸುತ್ತಲೂ ನೀರಿನ ಒರತೆ ಇತ್ತು.ಅದು ಈಗಲೂ ಇದೆ.ಮನೆಗೆ ಬೇಕಾದ ಮುಲಿ ಹುಲ್ಲು,ಕಟ್ಟಿಗೆಯಥೇಚ್ಛವಾಗಿ ದೊರಕುತ್ತಿತ್ತು.
ಭೈರವರಸರು ಜನತೆಗಾಗಿ ಈ ಗುಡ್ಡವನ್ನು ಸಂರಕ್ಷಿಸುತ್ತಿದ್ದರು.ಎಲ್ಲಿ ಹಾಳೆ ಮರಗಳಿತ್ತೋ ಅಥವಾ ಹಾಳೆ ಮರಗಳಿವೆಯೋ ಅಲ್ಲೊಂದು ಕಳೆ ಇರುತ್ತದೆ.ಆ ಕಳೆ ಅಳಿಸಿ ಹೋಗುವುದ್ದಿಲ್ಲ.ಏಕೆಂದರೆ ಇದೊಂದು ಪರಿಣಾಮಕಾರಿ ಔಷಧೀಯ ಗುಣಗಳನ್ನು ಹೊಂದಿರುವ ಹೆಗ್ಗಳಿಕೆಗೆ ಪಾತ್ರವಾಗಿದೆ.
.✍️ಇರ್ವತ್ತೂರು ಗೋವಿಂದ ಭಂಡಾರಿ
ಜಾಹೀರಾತು
Post a comment