ಕಾರ್ಕಳ:ಇತ್ತೀಚೆಗೆ ಐದಾರು ವರುಷದ ಪುಟ್ಟ ಹುಡುಗನೊಬ್ಬ ಕೊರಗಜ್ಜನ ಹಾಡಿಗೆ ದ್ವನಿಯಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ಅದು ಸಾಕಷ್ಟು ವೈರಲ್ ಆಗಿತ್ತು ಮತ್ತು ಸಾಕಷ್ಟು ಪ್ರಶಂಸೆಗೂ ಪಾತ್ರವಾಗಿತ್ತು.
ಕಾರ್ಕಳ ಹಿರ್ಗಾನದ ರಾಜೀವನಗರದ ಕಾರ್ತಿಕ್ ಎನ್ನುವ ಬಾಲಕ ಈ ಹಾಡನ್ನು ಹಾಡಿದ್ದು ಜನಮನ ಗೆದ್ದಿತ್ತು.
ಕಾರ್ತಿಕ್ ನ ಮನೆಗೆ ಕಾರ್ಕಳ ವಿಜೇತ ಶಾಲೆಯ ಸಂಸ್ಥಾಪಕಿ ಕಾಂತಿ ಹರೀಶ್ ಭೇಟಿ ನೀಡಿ ಕಾರ್ತಿಕ್ ಗೆ ಸಂಪೂರ್ಣ ಉಚಿತ ಶಿಕ್ಷಣವನ್ನು ತನ್ನ ಶಾಲೆಯಲ್ಲಿಯೇ ಕೊಡಿಡುವ ವ್ಯವಸ್ಥೆ ಮಾಡಿದ್ದಾರೆ.ಅಲ್ಲದೆ ಅವನ ಅಕ್ಕನಿಗೂ ತಮ್ಮ ಶಾಲೆಯಲ್ಲಿ ಕೆಲಸ ನೀಡುವ ಭರವಸೆ ನೀಡಿದ್ದಾರೆ.
Post a comment