ಮಟ್ಕಾ ಜುಗಾರಿ ಆಟಕ್ಕೆ ಸಾರ್ವಜನಿಕರಿಂದ ಹಣ ಸಂಗ್ರಹಿಸುತಿದ್ದ ಮೊಹಮ್ಮದ್ (72) ಎಂಬಾತನನ್ನು ಕಾರ್ಕಳ ನಗರ ಠಾಣೆ ಪೊಲೀಸ್ ಉಪನಿ ರೀಕ್ಷಕ ಮಧು ಬಿಇ ಕಾರ್ಕಳ ಬಸ್ ನಿಲ್ದಾಣದ ಸಮೀಪ ಬಂಧಿಸಿದ್ದಾರೆ.
ಬಂಧಿತನಿಂದ ಮಟ್ಕಾ ಚೀಟಿ-1, ಬಾಲ್ಪೆನ್,1000 ರೂ ನಗದು ಹಣವನ್ನು ವಶಕ್ಕೆ ಪಡೆಯಲಾಗಿದೆ.ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಪೊಲೀಸ್ ವರದಿ
ಕಾರ್ಕಳ: ಮಧು ಬಿಇ ಪೊಲೀಸ್ ಉಪನಿ ರೀಕ್ಷಕರು ಕಾರ್ಕಳ ನಗರ ಠಾಣೆ ಠಾಣೆ ಇವರು ಬಸ್ ನಿಲ್ದಾಣದ ಸಮೀಪ ಸಾರ್ವಜನಿಕ ಸ್ಥಳದಲ್ಲಿ ದಿನಾಂಕ 12/11/2020 ರಂದು 14:00 ಗಂಟೆಗೆ ಮಟ್ಕಾ ಜುಗಾರಿ ಆಟದ ಬಗ್ಗೆ ಸಾರ್ವಜನಿಕರಿಂದ ಹಣವನ್ನು ಸಂಗ್ರಹಿಸುತ್ತಿದ್ದ ಆಪಾದಿತ ಮೊಹಮ್ಮದ್ (72) ತಂದೆ:ಅಬ್ಬಾಸ್ಖಾದರ್ ವಾಸ:ಮನೆ ನಂಬ್ರ 4-163, ಶಾಂತಿಪಲ್ಕೆ, ಜಾರ್ಕಳ ಕುಕ್ಕುಂದೂರು ಗ್ರಾಮ, ಕಾರ್ಕಳ ತಾಲೂಕು, ಉಡುಪಿ ಈತನನ್ನು ವಶಕ್ಕೆ ಪಡೆದು, ಆಪಾದಿತನ ವಶದದಲ್ಲಿದ್ದ ಮಟ್ಕಾ ಚೀಟಿ-1, ಬಾಲ್ಪೆನ್, ನಗದು 1000/-(100X9=900,10X10=100) ರೂಪಾಯಿಗಳನ್ನು ಮುಂದಿನ ಕ್ರಮದ ಬಗ್ಗೆ ಸ್ವಾಧೀನಪಡಿಸಿಕೊಂಡು ಆಪಾದಿತನ ದಸ್ತಗಿರಿ ಮಾಡಿರುವುದಾಗಿದೆ ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 92/2020 ಕಲಂ: 78(1) (111) ಕರ್ನಾಟಕ ಪೊಲೀಸ್ ಕಾಯ್ದೆಯಂತೆ ಪ್ರಕರಣ ದಾಖಲಾಗಿರುತ್ತದೆ.
ಜಾಹೀರಾತು
Post a comment