ಕಾರ್ಕಳ:ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೋರ್ವರಿಗೆ ಕಾರು ಚಾಲಕ ಕಾರು ಡಿಕ್ಕಿ ಹೊಡೆದು ಪರಾರಿಯಾದ ಘಟನೆ ನ.18 ರಂದು ಸಂಜೆ 6:45 ಗಂಟೆಗೆ ನಡೆದಿದೆ.
ತಾಲೂಕಿನ ಕಸಬ ಗ್ರಾಮದ ಬಂಗ್ಲೆಗುಡ್ಡೆ –ಪುಲ್ಕೇರಿ ಬೈಪಾಸ್ ರಸ್ತೆಯಲ್ಲಿರುವ ಶ್ರೀ ದುರ್ಗಾ ಇಂಜಿನಿಯರಿಂಗ್ ವರ್ಕ್ಸ್ ಬಳಿ ಜಾನ್ ಡಿಸೋಜಾ ಎಂಬುವವರು ತಮ್ಮ ಮನೆ ಕಡೆಗೆ ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುವಾಗ ಪುಲ್ಕೇರಿ ಕಡೆಯಿಂದ ಬಂಗ್ಲೆಗುಡ್ಡೆ ಕಡೆಗೆ ಅತೀವೇಗದಿಂದ ಕಾರು ಚಲಾಯಿಸಿಕೊಂಡು ಬಂದ ಚಾಲಕ ಡಿಕ್ಕಿ ಹೊಡೆದು ಪರಾರಿಯಾಗಿದ್ದಾನೆ.
ಪರಿಣಾಮವಾಗಿ ಜಾನ್ ಡಿಸೋಜಾರವರ ಎರಡೂ ಕಾಲುಗಳ ಮೂಳೆಮುರಿತ ಉಂಟಾಗಿದೆ. ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಾಹೀರಾತು
Post a comment