ಪೋಲಿಸ್ ಅರಕ್ಷಕರ ಠಾಣೆ ಕಾರ್ಕಳ ಮತ್ತು ರೋಟರಿ ಆನ್ಸ್, ರೋಟರಾಕ್ಟ್ ಸಂಸ್ಥೆ ಕಾರ್ಕಳ ಇವರ ಜಂಟಿ ಆಶ್ರಯದಲ್ಲಿ ಕೊರೋನದ ಮುನ್ನೆಚ್ಚರಿಕೆ ಕರಪತ್ರಗಳನ್ನು ಅರಕ್ಷಕರ ಠಾಣೆಯಲ್ಲಿ ಬಿಡುಗಡೆ ಮಾಡಲಾಯಿತು. ಹಾಗೂ ಮಾಸ್ಕ ಕಡ್ಡಾಯ ಎನ್ನುವ ಪೋಸ್ಟರ್ ಸ್ಟಿಕರ್ ಗಳನ್ನು ಬಿಡುಗಡೆ ಮಾಡಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಠಾಣೆಯ ಸಿಪಿಐ ಅಧಿಕಾರಿ ಸಂಪತ್ ಕುಮಾರ್ ವಹಿಸಿದ್ದರುನಗರ ಠಾಣೆಯ ಎಸ್ಐ ದಾಮೋದರ್ ಮತ್ತು ರೂರಲ್ ಠಾಣೆಯ ಎಸ್ಐ ನಾಸಿರ್ ಹುಸೇನ್ ಉಪಸ್ಥಿತರಿದ್ದರು.ರೋಟರಿ ಆನ್ಸ್ ಅಧ್ಯಕ್ಷೆ ರೋ.ರಮಿತಾ ಶೈಲೇಂದ್ರ ಸ್ವಾಗತಿಸಿದರು. ಆನ್ಸ್ ಅಧ್ಯಕ್ಷೆ ಕಾರ್ಯದರ್ಶಿ ಸುಮಾ ನಾಯಕ್ ನಿರೂಪಿಸಿದರು.ರೋಟರಾಕ್ಟ್ ಅಧ್ಯಕ್ಷ ರೋ ರಾಹುಲ್ ರಾಜೇಶ್ ಅವರು ಎಲ್ಲರಿಗೂ ಸ್ಮರಣಿಕೆ ನೀಡಿ ಗೌರವಿಸಿದರು. ಕಾರ್ಯಕ್ರಮದಲ್ಲಿ ಇಲಾಖೆಯ ಸಿಬ್ಬಂದಿ ವರ್ಗದವರು, ರೋ ಬಾಲಕೃಷ್ಣ, ರೋ ಪ್ರಶಾಂತ್, ರೋಟರಿ ಕಾರ್ಯದರ್ಶಿ ರೋ ಸಮೀರ್ ಅವರು ಉಪಸ್ಥಿತರಿದ್ದರು.ಆನ್ ಶಶಿಕಲಾ ಗೌಡ ವಂದಿಸಿದರು.
ಸಾರ್ವಜನಿಕರಿಗೆ ಮಾಸ್ಕ್ ಕಡ್ಡಾಯ ಎನ್ನುವ ಸಂದೇಶವನ್ನು ನೀಡುತ್ತಾ, ಅರಕ್ಷಕರ ಠಾಣೆ ಅವರ ವತಿಯಿಂದ ಮಾಸ್ಕ್ ಧರಿಸದೆ ಇರುವ ವ್ಯಕ್ತಿಗಳಿಗೆ ಯಾವುದೇ ರೀತಿಯ ದಂಡವನ್ನು ನೀಡದೆ ಉಚಿತ ಮಾಸ್ಕ್ ವಿತರಣೆಯನ್ನು ಮಾಡಲಾಯಿತು. ಕಾರ್ಕಳ ಬಸ್ ಸ್ಟ್ಯಾಂಡ್, ಜೋಡುರಸ್ತೆ, ಬಂಡಿಮಠ ಮುಂತಾದ ಕಡೆ ಕಾರ್ಯಕ್ರಮವು ನಡೆಯಿತು. ಕರಪತ್ರಗಳನ್ನು ಹಂಚುತ್ತಾ ಜನರಿಗೆ ಉತ್ತಮ ವನ್ನು ಮಾಹಿತಿ ಕೊಡಲು ಕಾರ್ಯಕ್ರಮ ಸಾಕ್ಷಿಯಾಯಿತು.
Post a comment