ಕಾರ್ಕಳ:ಜೈನ ಪವಿತ್ರ ಕ್ಷೇತ್ರಗಳಿಗೆ ಅವಮಾನ:ಕ್ರಮ ಕೈಗೊಳ್ಳುವಂತೆ ತಹಸೀಲ್ದಾರ್ ಗೆ ಮನವಿ-Times of karkala

ಕಾರ್ಕಳ:ಕಾರ್ಕಳದ ಹೆಗ್ಗುರುತುಗಳಾಗಿರುವ  ಐತಿಹಾಸಿಕ ಮತ್ತು ಪವಿತ್ರ ತೀರ್ಥ ಕ್ಷೇತ್ರಗಳಾದ ಆನೆಕೆರೆ ಬಸದಿ, ಕಾರ್ಕಳ ಚತುರ್ಮುಖ ಬಸದಿ, ದೇಶದಲ್ಲಿಯೇ 2 ನೇ ಅತೀ ಎತ್ತರದ ಬಾಹುಬಲಿ ಬೆಟ್ಟದ  ಆವರಣವನ್ನು ಪಾರ್ಕ್ ನಂತೆ ಬಳಸಿಕೊಂಡು ಅದರ ಪಾವಿತ್ರ್ಯತೆಯನ್ನು ಹಾಳು ಮಾಡುವ ಪ್ರಕ್ರಿಯೆ ನಡೆಯುತ್ತಿದ್ದು,ಇಂತಹ ಪವಿತ್ರ  ಕ್ಷೇತ್ರಗಳ ಆವರಣದ ಬಳಿಯಲ್ಲಿ, ಯಾತ್ರಾರ್ಥಿ ಗಳಿಗೆ, ಭಕ್ತರಿಗೆ ಮುಜುಗರ ಆಗುವ ರೀತಿಯಲ್ಲಿ ಪ್ರೇಮಿಗಳ ಸುತ್ತಾಟ, ಪ್ರೀ - ವೆಡ್ಡಿಂಗ್ ಫೋಟೋ ಶೂಟ್ ನಂತಹ ಕ್ರಿಯೆಗಳು, ಪುಂಡರು ಮದ್ಯ ಪಾನ ಮಾಡುವ ದುಷ್ಕ್ರತ್ಯಗಳು  ಇತ್ತೀಚಿಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. 


ದೇಶದ ಅನೇಕ ಭಾಗಗಳಿಂದ ಪೂಜ್ಯ ಮುನಿಗಳು, ಜೈನ ಶ್ರಾವಕರು ಈ ಘಟನೆಗಳಿಗೆ  ತೀವ್ರವಾದ ಖಂಡನೆಯನ್ನು ವ್ಯಕ್ತಪಡಿಸಿರುತ್ತಾರೆ. ಇದನ್ನು ಮನಗಂಡು, ಕಾರ್ಕಳ ಜೈನ್ ಬ್ರಿಗೇಡ್ ನ ಸದಸ್ಯರು, ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ  ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವವರನ್ನು ಕಾನೂನಿನ ಮೂಲಕ ಶಿಕ್ಷೆಗೆ ಗುರಿಪಡಿಸಬೇಕೆಂದು,  ಕಾರ್ಕಳ ತಹಶೀಲ್ದಾರರರು, ಕಾರ್ಕಳ ನಗರ ಠಾಣಾಧಿಕಾರಿಗಳು ಮತ್ತು ಕಾರ್ಕಳ ಪುರಸಭೆ ಮುಖ್ಯಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಿದರು. 


ಮನವಿಗೆ ಸ್ಪಂದಿಸಿದ ತಹಶೀಲ್ದಾರರು ಮತ್ತು ಅಧಿಕಾರಿಗಳು ಇಂತಹ ಕೃತ್ಯದಲ್ಲಿ ತೊಡಗುವವರ ವಿರುದ್ಧ ಸೂಕ್ತ ಕ್ರಮವನ್ನು ಕೈಗೊಳ್ಳುತ್ತೇವೆ ಎಂಬ ಭರವಸೆಯನ್ನು ನೀಡಿದರು.ಆನೆಕೆರೆ ಬಸದಿ ಮೊಕ್ತೇಸರರಾದ ಶ್ರೀ ಉದಯ ಕಡಂಬ, ಮತ್ತು ಬಸದಿ ಪುರೋಹಿತರಾದ ಶ್ರೀ ಸುನಿಲ್ ಇಂದ್ರ ಈ ಸಂಧರ್ಭದಲ್ಲಿ ಉಪಸ್ಥಿತರಿದ್ದರು.


https://www.timesofkarkala.in/2020/10/blog-post_8.htmlLabels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget