ಕದ್ರಿ ಫ್ರೆಂಡ್ಸ್ ಸರ್ಕಲ್ ತಂಡದ ಸದಸ್ಯರು ಕೊರಗಜ್ಜನ ಹಾಡಿನ ಮೂಲಕ ಪ್ರಖ್ಯಾತಿ ಪಡೆದ ವಿಶೇಷ ಪ್ರತಿಭೆ ಮಾಸ್ಟರ್ ಕಾರ್ತಿಕ್ ನ ಮನೆಗೆ ಭೇಟಿ ನೀಡಿ ಆತನ ಪ್ರತಿಭೆಯನ್ನು ಗುರುತಿಸಿ ಗೌರವಿಸಿದರು. ಅದರೊಂದಿಗೆ ಆತನ ಸಂಗೀತ ಪ್ರತಿಭೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಜತೆ ಜತೆಯಲ್ಲಿ ಧಾರವಾಹಿ ಖ್ಯಾತಿಯ ಪ್ರಖ್ಯಾತ ಸಂಗೀತ ನಿರ್ದೇಶಕರಾದ ಶ್ರೀ ಸುನಾದ್ ಗೌತಮ್ ಹಾಗೂ ಅವರ ತಂಗಿ ಜತೆ ಜತೆಯಲ್ಲಿ ಧಾರಾವಾಹಿಯ ಟೈಟಲ್ ಹಾಡಿನ ಪ್ರಖ್ಯಾತ ಗಾಯಕಿ ನಿನಾದ ನಾಯಕ್ ಇವರ ಮೂಲಕ ಬಾಲಕನಿಗೆ 2 ತಿಂಗಳ ಅವಧಿಯವರೆಗೆ ವೈಯುಕ್ತಿಕವಾಗಿ ಸಂಗೀತ ಅಭ್ಯಾಸ ನೀಡುವ ಬಗ್ಗೆ ವ್ಯವಸ್ಥೆಯನ್ನು ಕಲ್ಪಿಸಲಾಯಿತು.
ಇದರ ಜತೆಯಲ್ಲಿ ಇಂದು ಈ ಹಾಡಿನ ಮೂಲಕ ಪ್ರಖ್ಯಾತಿ ಹೊಂದಲು ಪ್ರಮುಖ ಕಾರಣರಾದ ವ್ಯಕ್ತಿ ಆತನ ಸಹೋದರ ಶ್ರೀ ಯೋಗೀಶ್ ಅವರನ್ನು ಕೂಡ ಗುರುತಿಸಿ ಗೌರವಿಸಲಾಯಿತು.
ಇದರೊಂದಿಗೆ ವಿಜೇತ ವಿಶೇಷ ಶಾಲೆಗೆ ಭೇಟಿ ನೀಡಿ ವಿಶೇಷ ಮಕ್ಕಳ ಚಟುವಟಿಕೆಗಳನ್ನು ವೀಕ್ಷಿಸಿ, ವಿಶೇಷ ಮಕ್ಕಳು ತಯಾರಿಸಿದ ಸ್ವದೇಶಿ ದೀಪಾವಳಿ ಹಣತೆಯನ್ನು ಖರೀದಿಸಿ, ವಿಶೇಷ ಮಕ್ಕಳ ಶ್ರೇಯೋಭಿವೃದ್ಧಿಗಾಗಿ ದೇಣಿಗೆ ನೀಡಿ ಸಹಕರಿಸಿದರು.
ಈ ಸಂದರ್ಭದಲ್ಲಿ ತಂಡದ ಪದಾಧಿಕಾರಿಗಳಾದ ಶ್ರೀ ಜಯರಾಮ್ ಕುಲಾಲ್, ಶ್ರೀ ಗಣೇಶ್,ಶ್ರೀ ಸುದೀಪ್, ಶ್ರೀ ನಾಗೇಶ್, ಶ್ರೀ ಪ್ರಜ್ವಲ್ , ಶ್ರೀ ಪ್ರಜ್ವಲ್ ದೇವಾಡಿಗ, ಶ್ರೀ ಕೇಶವ್, ಶ್ರೀ ರವಿ ಶ್ರೀ ಸಂತೋಷ್ ಬೈಲೂರ್, ಡಾ. ಕಾಂತಿ ಹರೀಶ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
Post a comment