ಮನೆ ಮನೆಯಲ್ಲಿ ಸಂಗ್ರಹವಾಗುವ ಕಸ ವಿಲೇವಾರಿಯ ಬಗ್ಗೆ ಪುರಸಭೆಯು ಸಾರ್ವಜನಿಕರ ಗಮನಕ್ಕೆ ತಾರದೆ ಹೊಸ ಕಾನೂನನ್ನು ಜಾರಿ ಮಾಡಿದ್ದು ಇದರಿಂದ ಸಾರ್ವಜನಿಕರಲ್ಲಿ ಗೊಂದಲ ಉಂಟಾಗಿದೆ.
ಪುರಸಭೆಯು ಸಾರ್ವಜನಿಕರಿಗೆ ಸರಿಯಾದ ಮಾಹಿತಿಯನ್ನು ನೀಡದೆ ಏಕಾಏಕಿಯಾಗಿ ಕಾನೂನು ರೂಪಿಸಿರುದರಿಂದ ಸರಿಯಾದ ರೀತಿಯಲ್ಲಿ ಕಸವಿಲೇವಾರಿಯಾಗದೆ ಕಸ ಮನೆಗಳಲ್ಲಿ ಮತ್ತು ವಾಣಿಜ್ಯ ಕೇಂದ್ರದಲ್ಲಿ ಉಳಿದು ಸಾರ್ವಜನಿಕರಿಗೆ ತೊಂದರೆಯಾಗಿದೆ ಅದ್ದರಿಂದ ಈ ಬಗ್ಗೆ ಸೂಕ್ತ ಕ್ರಮ ಜರುಗಿಸಿ ಸಮಸ್ಯೆಯನ್ನು ಬಗೆಹರಿಸಬೇಕಾಗಿ ಪುರಸಭಾ ಮುಖ್ಯಾದಿಕಾರಿಯವರಿಗೆ ಮನವಿಯನ್ನು ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಶುಭದರಾವ್, ಅಶ್ಫಕ್ ಆಹಮ್ಮದ್, ಪ್ರತಿಮಾ, ರೆಹಮತ್, ವಿನ್ನಿ ಮೆಂಡೋನ್ಸಾ, ಪ್ರಭಾ ಉಪಸ್ಥಿತರಿದ್ದರು.
ಜಾಹೀರಾತು
Post a comment