ಕಾರ್ಕಳ:ಅಕ್ಷರದಾಸೋಹ ನೌಕರರ ವೇತನ ಹೆಚ್ಚಳಗೊಳಿಸಲು ಆಗ್ರಹಿಸಿ ನವಂಬರ್ 26 ರಂದು ಮುಷ್ಕರ-Times of karkala

ಕಾರ್ಕಳ:ನ.03:"ಅಕ್ಷರದಾಸೋಹ ನೌಕರರನ್ನು ಖಾಯಂ ಗೊಳಿಸಿ,ಸರಕಾರಿ ನೌಕರರಾಗಿ ಪರಿಗಣಿಸಬೇಕು,ಕಾರ್ಮಿಕ ಕಾನೂನು ತಿದ್ದುಪಡಿ ವಿರುದ್ಧ ನವಂಬರ್ 26 ರಂದು ಅಕ್ಷರದಾಸೋಹ ನೌಕರರು ಮುಷ್ಕರ ಮಾಡಲಿದ್ದಾರೆ ಎಂದು ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಹೇಳಿದರು.

ಸಿಐಟಿಯು  ಮುಖಂಡರಾದ ಕವಿರಾಜ್ ಮಾತನಾಡಿ ನವಂಬರ್ 09 ರಂದು ಜಿಲ್ಲಾಧಿಕಾರಿ ಕಛೇರಿ ಎದುರು ಪ್ರತಿಭಟಿಸಿ ಅಕ್ಷರದಾಸೋಹ ನೌಕರರು ಮುಷ್ಕರದ ನೋಟಿಸು ನೀಡಲಿದ್ದಾರೆ ಎಂದು ಹೇಳಿದರು.

ಕಾರ್ಮಿಕ ಮುಖಂಡರಾದ ನಾಗೇಶ ಆಚಾರ್ಯ ಮಾತನಾಡಿದರು.ನೌಕರರ ಪ್ರಧಾನ ಕಾರ್ಯದರ್ಶಿ ಸುನಂದ ಮುಷ್ಕರ ಮಹತ್ವ ತಿಳಿಸಿ ಯಶಸ್ವಿಗೊಳಿಸುವಂತೆ ಕರೆ ನೀಡಿದರು.ಸಭೆಯ ಅಧ್ಯಕ್ಷತೆಯನ್ನು ಬೇಬಿ ಭಂಡಾರಿ ವಹಿಸಿದ್ದರು.ಸುನೀತಾ ಶೆಟ್ಟಿ ಉಪಸ್ಥಿತರಿದ್ದರು. ಸಂಧ್ಯಾ ಗೋಖಲೆ  ವಂದಿಸಿದರು 




https://www.timesofkarkala.in/2020/10/blog-post_8.html





Labels:

Post a comment

MKRdezign

Contact form

Name

Email *

Message *

Powered by Blogger.
Javascript DisablePlease Enable Javascript To See All Widget