"ಭಾರತೀಯ ಸಂಸ್ಕೃತಿಯು ಆಧ್ಯಾತ್ಮಿಕತೆ ವೈಚಾರಿಕತೆ ಹಾಗೂ ಭಾವನಾತ್ಮಕವಾಗಿ ಪಾಶ್ಚಾತ್ಯ ಹಾಗೂ ವೈಜ್ಞಾನಿಕತೆಗೆ ನಿಲುಕದಷ್ಟು ಹೆಚ್ಚು ಅರ್ಥಪೂರ್ಣವಾಗಿದೆ"-ವಿದ್ವಾನ್ ಶ್ರೀ ಶಂಕರನಾರಾಯಣ ಭಟ್

ಕಾರ್ಕಳ:"ಭಾರತೀಯ ಸಂಸ್ಕೃತಿಯು ಆಧ್ಯಾತ್ಮಿಕತೆ ವೈಚಾರಿಕತೆ ಹಾಗೂ ಭಾವನಾತ್ಮಕವಾಗಿ ಪಾಶ್ಚಾತ್ಯ ಹಾಗೂ ವೈಜ್ಞಾನಿಕತೆಗೆ ನಿಲುಕದಷ್ಟು ಹೆಚ್ಚು ಅರ್ಥಪೂರ್ಣವಾಗಿದೆ" ಎಂದು ವಿದ್ವಾನ್ ಶ್ರೀ ಶಂಕರನಾರಾಯಣ ಭಟ್ ಹೇಳಿದರು. 

ಅವರು ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ ಹಾಗೂ ಆನ್ಸ್ ಕ್ಲಬ್ ಸಹಭಾಗಿತ್ವದಲ್ಲಿ ಇತ್ತೀಚೆಗೆ ನಡೆದ ದೀಪಾವಳಿ ಹಬ್ಬದ ವಿಶೇಷ ಆಚರಣೆ ಪ್ರಯುಕ್ತ ನಡೆದ ಕುಟುಂಬ ಸಮ್ಮಿಲನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. 


ಕಾರ್ಯಕ್ರಮದ ಅಧ್ಯಕ್ಷತೆಯನ್ನು  ಕ್ಲಬ್ಬಿನ ಅಧ್ಯಕ್ಷರಾದ ರೊ. ಪ್ರಶಾಂತ್ ಬೆಳಿರಾಯ ಇವರು ವಹಿಸಿದ್ದರು. ವೇದಿಕೆಯಲ್ಲಿ   ಕ್ಲಬ್ಬಿನ ಮಾರ್ಗದರ್ಶಕರಾದ ರೊ.ಪಿಡಿಜಿ. ಡಾ. ಭರತೇಶ್ ಆದಿರಾಜ್ ಮತ್ತು  ಆನ್ಸ್  ಕ್ಲಬ್ಬಿನ ಅಧ್ಯಕ್ಷೆ ಆನ್ ಮೇಘಾ ಪ್ರಶಾಂತ್ ಜೈನ್ ಉಪಸ್ಥಿತರಿದ್ದರು. 

ಇದೇ ಸಂದರ್ಭದಲ್ಲಿ ಮಕ್ಕಳ ದಿನಾಚರಣೆ ಪ್ರಯುಕ್ತ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ  ಆನ್ಲೈನ್ ಮೂಲಕ ಹಮ್ಮಿಕೊಂಡಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನಗಳನ್ನು ನೀಡಲಾಯಿತು. ಕಾರ್ಯಕ್ರಮದಲ್ಲಿ ರೊ.ಚಂದ್ರಶೇಖರ ಹೆಗ್ಡೆ,ಜಗದೀಶ್ ಹೆಗ್ಡೆ, ಸ್ಪರ್ಧಾ ವಿಜೇತರು ಹಾಗೂ ಅವರ ಹೆತ್ತವರು, ರೋಟರಿ ಮತ್ತು ಆನ್ಸ್ ಸದಸ್ಯರು ಉಪಸ್ಥಿತರಿದ್ದರು.ಆನ್ ಮೇಘಾ ಪ್ರಶಾಂತ್ ಜೈನ್ ಮುಖ್ಯಅತಿಥಿಗಳನ್ನು ಪರಿಚಯಿಸಿದರು, ರೊ. ಗೀತಾ ರಾವ್ ಸ್ಪರ್ಧಾ ವಿಜೇತರ ಪಟ್ಟಿ ವಾಚಿಸಿದರು.ರೊ. ಗೀತಾ ಕಾಮತ್ ಕಾರ್ಯಕ್ರಮ ನಿರೂಪಿಸಿದರು.ರೊ.ಗಣೇಶ ಬರ್ಲಾಯ ವಂದನಾರ್ಪಣೆ ಮಾಡಿದರು. ರೋಟರಿ ಹಾಗೂ ಆನ್ ಕುಟುಂಬದ ಸದಸ್ಯರು ಸಾಂಸ್ಕೃತಿಕ ಪ್ರದರ್ಶನ ನೀಡಿದರು.

ಜಾಹೀರಾತು 

  

 

Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget