ವೈರಲ್ ಆದ ಕಾರ್ಕಳದ ಬಾಲಕನ ದೈವದ ಹಾಡು:ದೈವಾರಾಧಕರ ಸಂಘದಿಂದ ಸನ್ಮಾನ -Times Of Karkala

 ಕಾರ್ಕಳ,ನ.2:ಕಾರ್ಕಳ ತಾಲೂಕಿನ ಹಿರ್ಗಾನದ ಮಾಸ್ಟರ್ ಕಾರ್ತಿಕ್ ಹಾಡಿರುವ ದೈವ ದೇವರ ಹಾಡೊಂದು ಬರಿ ಜನಮನ್ನಣೆಗೆ ಪಾತ್ರವಾಗಿದೆ. ಬಾಲಕನ ತಂದೆ ತಾಯಿ ಕೂಲಿ ಕೆಲಸ ಮಾಡಿಕೊಡು ಜೀವನ ಸಾಗಿಸುತ್ತಾರೆ. ಹುಟ್ಟಿನಲ್ಲಿ ಅಂಗವಿಕನಾಗಿದ್ದ ಕಾರ್ತಿಕ್ ಕಾಲಕ್ರಮೇಣ ನಡೆಯಲು ಆರಂಭಿಸಿದ್ದು ದೈವಾನುಗ್ರಹವೆಂದೇ ಹೆತ್ತವರು ನಂಬಿದ್ದಾರೆ. 


ಇದೀಗ ಕಾರ್ತಿಕ್ ಹಾಡಿರುವ ಕೊರಗಜ್ಜ ದೈವ ಹಾಗೂ ಇನ್ನಿತರ ದೈವದ ಹಾಡುಗಳು ವೈರಲ್ ಆಗಿವೆ. ಇದನ್ನು ಮನಗಂಡು ಕಾರ್ಕಳ ದೈವಾರಾಧಕರ ಸಂಘದ ಪದಾಧಿಕಾರಿಗಳು ಬಾಲಕ ಕಾರ್ತಿಕ್ ಮನೆಗೆ ಭಾನುವಾರದಂದು ಭೇಟಿ ಕೊಟ್ಟು ಅವನನ್ನು ಸನ್ಮಾನಿಸಿದರು.

 ಈ ವೇಳೆ ಒಕ್ಕೂಟದ ಅಧ್ಯಕ್ಷರಾದ ಅಶೋಕ್ ಶೆಟ್ಟಿ ಮಾಳ, ಪ್ರಧಾನ ಕಾರ್ಯದರ್ಶಿ ಸದಾನಂದ ಸಾಲಿಯಾನ್ , ಉಪಾಧ್ಯಕ್ಷ ಸಚಿನ್ ಸಾಲಿಯಾನ್, ಗೌರವ ಸಲಹೆಗಾರ ಸೂರ್ಯಕಾಂತ್ ದೇವಾಡಿಗ, ಬಾರಾಡಿ ಮೊಂಟು  ಪಾಣಾರ, ಬಾರಾಡಿ ಬೊಗ್ಗು ಪಾಣಾರ ಹಾಗೂ ಸೇಸಪ್ಪ ಪಾಣಾರ ಮೂರೂರು ಉಪಸ್ಥಿತರಿದ್ದರು. 

ಈ ಬಡ ಸಂಸಾರಕ್ಕೆ ಸಹಾಯ ಮಾಡಲಿಚ್ಚಿಸುವವರು ಸಂಪರ್ಕಿಸಿ-7022145910

https://www.timesofkarkala.in/2020/10/blog-post_8.html

Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget