"ಸೋತಲ್ಲೆಲ್ಲಾ ಮತ ಯಂತ್ರ ಹಾಳಾಗಿದೆ ಎನ್ನುವ ಕಾಂಗ್ರೆಸ್ ಪಕ್ಷ, ಅವರು ಗೆದ್ದ ಕಡೆ ಮತಯಂತ್ರ ಏನಾಗಿರುತ್ತೆ?. ಯಾವುದೇ ರಾಜಕೀಯ ಪಕ್ಷವಿರಲಿ ಸೋಲು ಗೆಲುವನ್ನು ಸಮನಾಗಿ ಸ್ವೀಕರಿಸಬೇಕು. ಸಿದ್ಧರಾಮಯ್ಯ ಗೆದ್ದಾಗ ಮತಯಂತ್ರ ಸರಿ ಇತ್ತು. ಈಗ ಸೋತಾಗ ಹಾಳಾಗಿದೆ ಎನ್ನುತ್ತಾರೆ"
![]() |
ದ.ಕ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ |
"ಇಂತಹ ಮಾತುಗಳು ಅವರಂತಹ ದೊಡ್ಡ ಒಳ್ಳೆಯ ವ್ಯಕ್ತಿಗಳಿಗೆ ಭೂಷಣವಲ್ಲ. ಮತಯಂತ್ರ ಕೆಟ್ಟಿಲ್ಲ, ಮನಸ್ಸು ಕೆಟ್ಟಿದೆ" ಎಂದು ದ.ಕ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಟಾಂಗ್ ಕೊಟ್ಟರು.
ಸುದ್ದಿಗಾರರೊಂದಿಗೆ ಮಾತಾಡಿದ ಅವರು, "ಎಲ್ಲಾ ಆರೋಗ್ಯ ಇಲಾಖೆಗಳಲ್ಲಿ ಕೊರೊನಾ ಟೆಸ್ಟ್ ಮಾಡುವ ವ್ಯವಸ್ಥೆ ಕಲ್ಪಿಸಲಾಗಿದೆ. ಕೆಲವು ಕಡೆಗಳಲ್ಲಿ ಏನಾದರೂ ಲೋಪಗಳಾಗಿದ್ದಲ್ಲಿ, ಸಾರ್ವಜನಿಕರಿಂದ ದೂರು ಬಂದಲ್ಲಿ, ಸಮೀಪದ ಆಸ್ಪತ್ರೆಗೆ ಅಗತ್ಯವಿದ್ದಲ್ಲಿ ಅಲ್ಲಿ ಕ್ಯಾಂಪ್ ಮಾಡುವ ವ್ಯವಸ್ಥೆ ಮಾಡಲಾಗುವುದು. ಆರಂಭದಲ್ಲಿ ಸಣ್ಣ ಪುಟ್ಟ ದೂರುಗಳು ಬರುವುದು ಸಾಮಾನ್ಯ. ಅದನ್ನು ಸರಿ ಪಡಿಸುತ್ತೇವೆ" ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಜಾಹೀರಾತು
Post a comment