ನಿಟ್ಟೆ ಲೇಮಿನ ಕ್ರಾಸ್ ಬಳಿ ಕಾರುಗಳ ನಡುವೆ ಡಿಕ್ಕಿ-Times of karkala

ಕಾರ್ಕಳ:ತಾಲೂಕಿನ ಲೆಮಿನಾ ಕ್ರಾಸ್ ಬಳಿ ಎರಡು ಕಾರುಗಳ ನಡುವೆ ಡಿಕ್ಕಿ ಹೊಡೆದು ಕಾರು ಜಖಂ ಗೊಂಡ ಘಟನೆ ನಡೆದಿದೆ.

ಕಾರ್ಕಳ ದಿಂದ ಬೆಳ್ಮಣ್‌  ಕಡೆಗೆ ಬರುತ್ತಿದ್ದ (KA-19-MF-3971) ಕಾರಿಗೆ ಬೆಳ್ಮಣ್‌  ಕಡೆಯಿಂದ  ಕಾರ್ಕಳ ಕಡೆಗೆ (KA- 21-Z- 1030) ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದಿದೆ.

ಯಾವುದೇ ಪ್ರಾಣಹಾನಿ ಸಂಭವಿಸಲಿಲ್ಲ.ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

ಪೊಲೀಸ್ ವರದಿ 

ಕಾರ್ಕಳ : ದಿನಾಂಕ 15/11/2020 ರಂದು 18:00 ಗಂಟೆಗೆ ಕಾರ್ಕಳ ತಾಲೂಕು ನಿಟ್ಟೆ  ಗ್ರಾಮದ ಲೆಮಿನಾ ಕ್ರಾಸ್‌ ಬಳಿ ಕಾರ್ಕಳ – ಪಡುಬಿದ್ರೆ . ಹೆದ್ದಾರಿಯಲ್ಲಿ  ಪಿರ್ಯಾದಿದಾರರಾದ ಥೋಮಸ್‌ ಪಿಂಟೋ . ಪ್ರಾಯ: 65  ವರ್ಷ, ತಂದೆ: ದಿ: ಲಾರೆನ್ಸ್‌ ಪಿಂಟೋ, ವಾಸ:ಮನೆ ನಂಬ್ರ 5-81 ಮುಂಡೆ ಬೈಲು ಬಡಗ ಎಕ್ಕಾರು ಅಂಚೆ ಎಕ್ಕಾರು ಗ್ರಾಮ ಮಂಗಳೂರು ತಾಲೂಕು ಇವರು ಕಾರ್ಕಳ ಕಡೆಯಿಂದ ಬೆಳ್ಮಣ್‌  ಕಡೆಯಿಂದ  KA-19-MF-3971 ನಂಬ್ರದ ಕಾರಿನಲ್ಲಿ  ಹೊಗುತ್ತಿದ್ದಾಗ ಎದುರಿನಿಂದ ಬೆಳ್ಮಣ್‌  ಕಡೆಯಿಂದ  ಕಾರ್ಕಳ ಕಡೆಗೆ  KA- 21-Z- 1030 ನೇ  ಕಾರಿನ  ಚಾಲಕ  ಅತೀ ವೇಗ ಮತ್ತು ಅಜಾಗರೂಕತೆಯಿಂದ ರಸ್ತೆಯ ತೀರಾ  ಎಡ ಭಾಗಕ್ಕೆ  ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ  ಕಾರಿಗೆ  ಢಿಕ್ಕಿ ಹೊಡೆದ ಪರಿಣಾಮ ಯಾರಿಗೂ  ಗಾಯವಾಗದೇ ಇದ್ದು  ಎರಡೂ  ಕಾರುಗಳ ಮುಂಭಾಗ  ಜಖಂಗೊಂಡಿರುವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 91/2020  ಕಲಂ: 279 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.


ಜಾಹೀರಾತು 

 


 https://www.timesofkarkala.in/2020/10/blog-post_8.html


Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget