ನಿವೃತ್ತ ಪ್ರಾಂಶುಪಾಲೆ ಮಿತ್ರ ಪ್ರಭಾ ಹೆಗ್ಡೆ ಅವರಿಗೆ ಸನ್ಮಾನ-Times of karkala

ಕಾರ್ಕಳದ ಎಸ್. ವಿ. ಟಿ ಪದವಿ ಕಾಲೇಜಿನ ನಿವೃತ್ತ ಪ್ರಿನ್ಸಿಪಾಲರಾದ ಶ್ರೀಮತಿ  ಮಿತ್ರಪ್ರಭಾ ಹೆಗ್ಡೆ ಅವರಿಗೆ ಅವರ ಪೂರ್ವ ವಿದ್ಯಾರ್ಥಿಗಳು, ವಿದ್ಯಾರ್ಥಿ ವೃಂದ ಮತ್ತು ಅಭಿಮಾನಿಗಳು ಸೇರಿ ಅಭಿನಂದಿಸಿ, ಸನ್ಮಾನಿಸುವ ಕಾರ್ಯಕ್ರಮವು ಕಾರ್ಕಳದ ಪ್ರಕಾಶ್ ಹೋಟೆಲಿನ ಉತ್ಸವ ಸಭಾಂಗಣದಲ್ಲಿ ನಡೆಯಿತು. 


ಹಿರಿಯ ಸಾಹಿತಿ ಅಂಬಾತನಯ ಮುದ್ರಾಡಿ ಅವರು ಸಭಾಧ್ಯಕ್ಷತೆ ವಹಿಸಿದ್ದರು. ಅಭಿನಂದನಾ ಭಾಷಣ ಮಾಡಿದ  ಮಂಗಳೂರಿನ ಹಿರಿಯ ಪತ್ರಕರ್ತ ಮನೋಹರ ಪ್ರಸಾದ್ ಅವರು ಮಾತನಾಡಿ"ಉತ್ತಮ ಶಿಕ್ಷಕರು ಸಮಾಜದ ಆಸ್ತಿ. ಅವರಿಂದ ಮಾತ್ರ ಸ್ವಸ್ಥ ಸಮಾಜ ನಿರ್ಮಾಣ ಸಾಧ್ಯ ಆಗುತ್ತದೆ. ಮಿತ್ರಪ್ರಭಾ ಹೆಗ್ಡೆ ಅವರು ಉತ್ತಮ ಕನ್ನಡ ಉಪನ್ಯಾಸಕಿ ಆಗಿ ಮತ್ತು ಪ್ರಾಂಶುಪಾಲರಾಗಿ ಗೆದ್ದಿದ್ದಾರೆ. ಅವರ ವಿದ್ಯಾರ್ಥಿಗಳು ಸೇರಿ ಇಂದು ಗುರುವಂದನಾ ಕಾರ್ಯಕ್ರಮವನ್ನು ಏರ್ಪಾಟು ಮಾಡಿದ್ದು ನಿಜಕ್ಕೂ  ಶ್ಲಾಘನೀಯ" ಎಂದರು.  


ಮಿತ್ರಪ್ರಭಾ ಹೆಗ್ಡೆ ಅವರಿಗೆ ಅಧ್ಯಕ್ಷರು ಶಾಲು ಹೊದಿಸಿ, ಫಲ ಪುಷ್ಪ ಸಹಿತ ಮಾನಪತ್ರ ನೀಡಿ, 'ಸರಸ್ವತಿ ಪ್ರಭಾ' ಎಂಬ ಬಿರುದು ನೀಡಿ ಸನ್ಮಾನಿಸಿದರು. "ಮಿತ್ರ ಪ್ರಭಾ ಅವರು ಮಾತೃ ಹೃದಯದ ಶಿಕ್ಷಕಿ ಆದ ಕಾರಣ ಅವರಿಗೆ ವಿದ್ಯಾರ್ಥಿಗಳ ಪ್ರೀತಿ ದೊರೆಯಿತು. ದುಡ್ಡು ಇದ್ದವರು ಮಾತ್ರ ಶ್ರೀಮಂತರಲ್ಲ. ಹೃದಯ ಶ್ರೀಮಂತಿಕೆ ಇರುವ ಶಿಕ್ಷಕರೂ ಶ್ರೀಮಂತರೇ ಆಗಿದ್ದಾರೆ" ಎಂದವರು ಹೇಳಿದರು.  ಕಾರ್ಕಳದ ಶ್ರೀ ಭುವನೇಂದ್ರ ಕಾಲೇಜಿನ ಪ್ರಾಚಾರ್ಯರಾದ ಡಾಕ್ಟರ್ ಮಂಜುನಾಥ್ ಕೋಟ್ಯಾನ್ ಅವರು ಶುಭಾಶಂಸನೆ ಮಾಡಿದರು. ಮಿತ್ರಪ್ರಭಾ ಅವರ ಮೊದಲ ಬ್ಯಾಚಿನ ವಿದ್ಯಾರ್ಥಿನಿ ಮುನಿಯಾಲ್ ಕಾಲೇಜಿನ ಪ್ರಾಂಶುಪಾಲರಾದ ಬೇಬಿ ಆಳ್ವಾ ಅವರು ಗುರುವಂದನಾ ಭಾಷಣ ನೆರವೇರಿಸಿ ತನ್ನ ಗುರುವಿಗೆ ನುಡಿನಮನ ಸಲ್ಲಿಸಿದರು. 


ಸನ್ಮಾನಕ್ಕೆ ಉತ್ತರಿಸಿದ ಮಿತ್ರಪ್ರಭಾ ಹೆಗ್ಡೆ ಅವರು ತನ್ನನ್ನು ಬೆಳೆಸಿದ ಎಸ್. ವಿ. ಟಿ. ಕಾಲೇಜಿನ ಆಡಳಿತ ಮಂಡಳಿ,ಸಹೋದ್ಯೋಗಿ ಬಂಧುಗಳು, ವಿದ್ಯಾರ್ಥಿ ಸಮೂಹ ಮತ್ತು ಕಾರ್ಕಳದ ಸಂಘ ಸಂಸ್ಥೆಗಳು ನನ್ನ ಭಾವ ಕೋಶದಲ್ಲಿ ಶಾಶ್ವತ ಸ್ಥಾನವನ್ನು ಪಡೆಯುತ್ತಾರೆ. ಅವರಿಗೆ ನಾನು ಋಣಿ" ಎಂದರು. ಇತ್ತೀಚೆಗೆ ಪಾರ್ತಿ ಸುಬ್ಬ ಪ್ರಶಸ್ತಿ ಸ್ವೀಕರಿಸಿದ ಹಿರಿಯ ಸಾಹಿತಿ ಶ್ರೀ ಅಂಬಾ ತನಯ ಮುದ್ರಾಡಿ ಅವರನ್ನು ಕಾರ್ಕಳ ಸಾಹಿತ್ಯ ಸಂಘ ಮತ್ತು  ಅಖಿಲ ಭಾರತ ಸಾಹಿತ್ಯ ಪರಿಷತ್ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದ  ಸಂಯೋಜಕರಾದ, ಕಾರ್ಕಳ ಪುರಸಭಾ ಸದಸ್ಯ ಶುಭದ್ ರಾವ್ ಅವರು ಸ್ವಾಗತಿಸಿದರು. ದಿವ್ಯಾ ಶುಭದ ರಾವ್ ಅವರು ಮಾನಪತ್ರ ವಾಚನ ಮಾಡಿದರು. ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದ ಎಸ್. ನಿತ್ಯಾನಂದ ಪೈ ಮತ್ತು ಅರ್ಚನ ಶೆಟ್ಟಿ ಅವರನ್ನು ವೇದಿಕೆಯಲ್ಲಿ ಗೌರವಿಸಲಾಯಿುತು. ಶಿಕ್ಷಕ ರಾಜೇಂದ್ರ ಭಟ್ ಕೆ ಅವರು ಕಾರ್ಯಕ್ರಮ ನಿರೂಪಿಸಿ ಧನ್ಯವಾದ ಅರ್ಪಿಸಿದರು.


https://www.timesofkarkala.in/2020/10/blog-post_8.html


Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget