ಒಂದು ವರ್ಷದ ಹಿಂದೆ ನಾಪತ್ತೆಯಾಗಿದ್ದ ಮಹಿಳೆಯ ಅಸ್ಥಿಪಂಜರ ಪತ್ತೆ-Times of karkala

ಪಂಜಾಬ್:ವರ್ಷದ ಹಿಂದೆ ಕಾಣೆಯಾಗಿದ್ದ 32 ವರ್ಷದ ಮಹಿಳೆಯ ಅಸ್ಥಿಪಂಜರ ರಾಜಕಾಲುವೆಯಲ್ಲಿ ಪತ್ತೆಯಾಗಿದ್ದು, ಪೊಲೀಸರು ಆರೋಪಿ ಪತಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. 


ಪಂಜಾಬ್ ಪಟಿಯಾಲದ ಪೊಲೀಸರು ವರ್ಷದ ಹಿಂದೆ ಕಾಣೆಯಾಗಿದ್ದ ಮಹಿಳೆಯ ಪ್ರಕರಣ ಭೇದಿಸಿದ್ದಾರೆ. 2019 ಅಕ್ಟೋಬರ್ ನಲ್ಲಿ 32 ವರ್ಷದ ರಮನ್‍ದೀಪ್ ಕೌರ್ ನಾಪತ್ತೆಯಾಗಿದ್ದರು. ಈ ಸಂಬಂಧ ರಮಣ್‍ದೀಪ್ ಪೋಷಕರು ಮಗಳು ಕಾಣೆಯಾಗಿರುವ ಬಗ್ಗೆ ದೂರು ದಾಖಲಿಸಿದ್ದರು.

 


ಮೃತ ರಣ್‍ದೀಪ್ ಕೌರ್ ಮದುವೆ 12 ವರ್ಷಗಳ ಹಿಂದೆ ಬಲ್ಜೀತ್ ಸಿಂಗ್ ಎಂಬಾತನ ಜೊತೆಯಾಗಿತ್ತು. ದಂಪತಿ ಬೋಲಡ್ ರಸ್ತೆಯಲ್ಲಿರುವ ಶಿವ ಕಾಲೋನಿಯಲ್ಲಿ ವಾಸವಾಗಿದ್ದರು. ದಂಪತಿಗೆ ಎರಡು ಮಕ್ಕಳು ಸಹ ಇವೆ. ಆದ್ರೆ ಪತ್ನಿಯ ನಡತೆಯ ಬಗ್ಗೆ ಪತಿ ಶಂಕೆ ವ್ಯಕ್ತಪಡಿಸುತ್ತಿದ್ದನು. ಇದೇ ವಿಷಯವಾಗಿ ದಂಪತಿ ನಡುವೆ ಜಗಳ ನಡೆಯುತ್ತಿತ್ತು.

ಪತ್ನಿ ಕಾಣೆಯಾದ ಬಗ್ಗೆ ಪೊಲೀಸರು ಪ್ರಶ್ನಿಸಿದ್ದಕ್ಕೆ ಯಾರ ಜೊತೆಯಲ್ಲಿ ಓಡಿ ಹೋಗಿರಬಹುದು ಎಂದು ಹೇಳುತ್ತಿದ್ದನು. ಇತ್ತ ಪತ್ನಿ ಕಾಣೆಯಾದ 5 ತಿಂಗಳ ನಂತರ ಪ್ರಕರಣ ಮುಚ್ಚಿತು ಎಂದು ತಿಳಿದು ಎರಡನೇ ಮದುವೆ ಸಹ ಆಗಿದ್ದಾನೆ. ಕೆಲ ದಿನಗಳ ಹಿಂದೆ ರಾಜಕಾಲುವೆಯಲ್ಲಿ ಅಸ್ಥಿಪಂಜರ ಪತ್ತೆಯಾಗಿತ್ತು. ಇತ್ತ ರಣ್‍ದೀಪ್ ಕೌರ್ ಪ್ರಕರಣದ ತನಿಖೆ ನಡೆಸುತ್ತಿದ್ದ ಪೊಲೀಸರಿಗೂ ಈ ವಿಷಯ ತಲುಪಿತ್ತು.

ತನಿಖೆ ಚುರುಕುಗೊಳಿಸಿದ ಪೊಲೀಸರು ಅನುಮಾನವಾಗಿ ಓಡಾಡುತ್ತಿದ್ದ ಬಲ್ಜೀತ್ ಸಿಂಗ್ ನನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೆ ಒಳಪಡಿಸಿದ್ದರು. ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿರುವ ಬಲ್ಜೀತ್ ಸಿಂಗ್, ಪತ್ನಿಯನ್ನು ಕೊಲೆಗೈದು ಬೌಸರ್ ಬೀಡ್ ಬಳಿಯ ರಾಜಕಾಲುವೆಯಲ್ಲಿ ಶವ ಎಸಗಿರೋದಾಗಿ ಹೇಳಿದ್ದಾನೆ.

ಪೊಲೀಸರು ಅನುಮಾನ ನಿಜವಾಗಿದೆ. ಸದ್ಯ ಪತ್ತೆಯಾಗಿರುವ ಶವ ರಣ್‍ದೀಪ್ ಕೌರ್ ಅವರದ್ದು ಎಂದು ತನಿಖಾಧಿಕಾರಿಗಳು ಖಚಿತಪಡಿಸುತ್ತಿದ್ದಾರೆ. ಇತ್ತ ಆರೋಪಿ ಸಹ ಪತ್ನಿ ಶವ ರಾಜಕಾಲುವೆಯಲ್ಲಿ ಎಸದಿರೋದಾಗಿ ಹೇಳಿದ್ದಾನೆ. ಅವಶ್ಯವಿದ್ದಲ್ಲಿ ಅಸ್ಥಿಪಂಜರದ ಡಿಎನ್‍ಎ ಪರೀಕ್ಷೆ ಮಾಡಿಸಲಾಗುವುದು ಎಂದು ಠಾಣೆಯ ಹಿರಿಯ ಅಧಿಕಾರಿ ಕರಂಜಿತ್ ಸಿಂಗ್ ತಿಳಿಸಿದ್ದಾರೆ.

ಜಾಹೀರಾತು 

 


 


https://www.timesofkarkala.in/2020/10/blog-post_8.htmlLabels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget