ನಿಟ್ಟೆ,ನ.2 : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬೆಲ್ಮನ್ ವಲಯದ ನಿಟ್ಟೆ ಒಕ್ಕೂಟದ ಪದಗ್ರಹಣವು ನಿಟ್ಟೆ ಗ್ರಾಮ ಪಂಚಾಯತ ದ ಸಭಾಂಗಣ ದಲ್ಲಿ ನಡೆಯಿತು.
ಮೂಡುಬಿದಿರೆ ತಾಲೂಕಿನ ಯೋಜನಾಧಿಕಾರಿ ನಾರಾಯಣ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಯೋಜನೆ ವತಿಯಿಂದ ನಡೆಯುವ ವಿವಿಧ ಕಾರ್ಯಕ್ರಮದ ಸದುಪಯೋಗವನ್ನು ಸದಸ್ಯರು ಪಡೆಯಬೇಕು. ಸಂಘವು ಕೊರೊನ ಜಾಗೃತಿ ಜೊತೆ ಕಾರ್ಯ ನಿರ್ವಹಿಸುತ್ತಿರುವುದು ಶ್ಲಾಘನೀಯ ಎಂದರು.
ಈ ಸಂದರ್ಭ ನೂತನ ಪದಾಧಿಕಾರಿಗಳಿಗೆ ವೀಳ್ಯದೆಲೆ ನೀಡುವ ಮೂಲಕ ಅಧಿಕಾರ ಹಸ್ತಾಂತರಿಸಲಾಯಿತು.
ವೇದಿಕೆಯಲ್ಲಿ ವಲಯ ಮೇಲ್ವಿಚಾರಕರು ಪ್ರಣೀತ, ನಿಕಟ ಪೂರ್ವ ಅಧ್ಯಕ್ಷರುಗಳಾದ ಧರಣೇಂದ್ರ ಜೈನ್, ಪ್ರಭಾಕರ್ ಶೆಟ್ಟಿ, ನೂತನ ಅಧ್ಯಕ್ಷರಾದ ಸಂದೀಪ್ ಕುಮಾರ್, ಸುನೀಲ್, ಸೇವಾ ಪ್ರತಿನಿಧಿಗಳದ ಸಬಿತಾ ಹಾಗೂ ಶ್ವೇತಾ, ಪದಾಧಿಕಾರಿಗಳು ಉಪಸ್ಥಿತರಿದ್ದರು.
ವೇದಿಕೆಯಲ್ಲಿ ವಲಯ ಮೇಲ್ವಿಚಾರಕರು ಪ್ರಣೀತ, ನಿಕಟ ಪೂರ್ವ ಅಧ್ಯಕ್ಷರುಗಳಾದ ಧರಣೇಂದ್ರ ಜೈನ್, ಪ್ರಭಾಕರ್ ಶೆಟ್ಟಿ, ನೂತನ ಅಧ್ಯಕ್ಷರಾದ ಸಂದೀಪ್ ಕುಮಾರ್, ಸುನೀಲ್, ಸೇವಾ ಪ್ರತಿನಿಧಿಗಳದ ಸಬಿತಾ ಹಾಗೂ ಶ್ವೇತಾ, ಪದಾಧಿಕಾರಿಗಳು ಉಪಸ್ಥಿತರಿದ್ದರು.
Post a comment